ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ರಾಮನಗರ ಜಿಲ್ಲೆಗೆ ರೋಹಿಣಿ ಪ್ರಥಮ

Rashmi Kasaragodu
Updated On : 8 May 2013, 9:10 am

ಕ.ಪ್ರ. ವಾರ್ತೆ  ರಾಮನಗರ   ಮೇ 7-
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ಅತಿ ಹೆಚ್ಚು ಅಂಕ ಗಳಿಸಿದವರ ಪೈಕಿ 3ನೇ ಸ್ಥಾನಿಯಾಗಿರುವ ಕನಕಪುರದ ಸೇಂಟ್ ಥಾಮಸ್ ಇಂಗ್ಲಿಷ್ ಶಾಲೆ ಆರ್.ರೋಹಿಣಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
620 ಅಂಕ ಗಳಿಸಿರುವ ಆಕೆ ಕನ್ನಡದಲ್ಲಿ 125, ಇಂಗ್ಲಿಷ್‌ನಲ್ಲಿ 97, ಹಿಂದಿ ಮತ್ತು ಗಣಿತದಲ್ಲಿ ನೂರಕ್ಕೆ ನೂರು, ವಿಜ್ಞಾನ ಮತ್ತು ಸಮಾಜ ವಿಜ್ಞಾನದಲ್ಲಿ ತಲಾ 99 ಅಂಕ ಪಡೆದಿದ್ದಾಳೆ.  ಜಿಲ್ಲೆ 2ನೇ ಸ್ಥಾನಿ ರಾಮನಗರದ ನ್ಯೂ ಮಿಲೇನಿಯಂ ಶಾಲೆಯ ನಿದಾ ಖಾನಮ್ ಒಟ್ಟು ಅಂಕ ಗಳಿಗೆ 605. ಕನ್ನಡದಲ್ಲಿ 116, ಇಂಗ್ಲಿಷ್‌ನಲ್ಲಿ 99, ಹಿಂದಿ 97, ಗಣಿತ 100, ವಿಜ್ಞಾನ 95, ಸಮಾಜ ವಿಜ್ಞಾನ 98 ಅಂಕ ಪಡೆದಿದ್ದಾಳೆ.   3ನೇ ಸ್ಥಾನವೂ ನ್ಯೂ ಮಿಲೇನಿಯಂ ಶಾಲೆ ಪಾಲಾಗಿದೆ. ಆ ಶಾಲೆ ವಿದ್ಯಾರ್ಥಿನಿ ನಿದಾ ಸಿಮ್ರಾನ್ ಕನ್ನಡದಲ್ಲಿ 116, ಇಂಗ್ಲಿಷ್ ಮತ್ತು ಗಣಿತದಲ್ಲಿ ತಲಾ 99, ಹಿಂದಿ 96, ವಿಜ್ಞಾನ 95, ಸಮಾಜ ವಿಜ್ಞಾನ 97 ಸೇರಿದಂತೆ ಒಟ್ಟಾರೆ 602 ಅಂಕ ಗಳಿಸಿದ್ದಾಳೆ. ಕನಕಪುರದ ಜೈನ್ ವಿದ್ಯಾಲಯ ಶಾಲೆಯ ತನುಶ್ರೀ 601 ಅಂಕದೊಂದಿಗೆ 4ನೇ ಸ್ಥಾನ ಪಡೆದಿದ್ದಾಳೆ. ಕನ್ನಡದಲ್ಲಿ 124, ಇಂಗ್ಲೀಷ್ 97, ಹಿಂದಿ 95, ಗಣಿತ 94, ವಿಜ್ಞಾನ 98, ಸಮಾಜ ವಿಜ್ಞಾನದಲ್ಲಿ 93 ಅಂಕಗಳನ್ನು ತೆಗೆದುಕೊಂಡಿದ್ದಾಳೆ.
ಚನ್ನಪಟ್ಟಣದ ಸೇಂಟ್ ಮೈಕೆಲ್ ಆಂಗ್ಲ ಶಾಲೆಯ ಕೆ.ಚಿನ್ಮಯಿ 5ನೇ ಸ್ಥಾನಿಯಾಗಿದ್ದು, ಈಕೆ ಕನ್ನಡದಲ್ಲಿ 120, ಇಂಗ್ಲಿಷ್ 98, ಹಿಂದಿ 96, ಗಣಿತ 94, ವಿಜ್ಞಾನ 93, ಸಮಾಜ 99 ಅಂಕಗಳು ಸೇರಿದಂತೆ ಒಟ್ಟಾರೆ 600 ಅಂಕಗಳನ್ನು ಪಡೆದಿದ್ದಾಳೆ.
ರಾಮನಗರ ವಿಶೇಷ: ಜಿಲ್ಲೆಯ ಐವರೂ ಅಗ್ರಸ್ಥಾನಿಗಳು ಬಾಲಕಿಯರು. ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ರೋಹಿಣಿ ಕನ್ನಡದಲ್ಲಿ 125ಕ್ಕೆ 125 ಅಂಕ ಪಡೆದಿದ್ದರೆ, ಕ್ರಮವಾಗಿ 2 ಮತ್ತು 3ನೇ ಸ್ಥಾನಿಗಳಾಗಿರುವ ಮುಸ್ಲಿಂ ವಿದ್ಯಾರ್ಥಿನಿಯರಾದ ನಿದಾ ಖಾನಮ್, ನಿದಾ ಸಿಮ್ರಾನ್ ಕನ್ನಡದಲ್ಲಿ ತಲಾ 116 ಅಂಕ ತೆಗೆದುಕೊಂಡು, ಗಮನ ಸೆಳೆದಿದ್ದಾರೆ.

ಚನ್ನಪಟ್ಟಣವೇ ನಂ.1
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಮಟ್ಟಿಗೆ ಅಗ್ರ ಸ್ಥಾನವನ್ನು ಚನ್ನಪಟ್ಟಣ ತಾಲೂಕು ಉಳಿಸಿಕೊಂಡಿದೆ. ತಾಲೂಕಿನ 3094 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 2859 ಮಂದಿ ತೇರ್ಗಡೆಯಾಗಿದ್ದು ಶೇಕಡ 92.40 ಫಲಿತಾಂಶ ಬಂದಿದೆ.  ಕನಕಪುರ ತಾಲೂಕು ಶೇಕಡ 90.33 ಫಲಿತಾಂಶದೊಂದಿಗೆ 2ನೇ ಸ್ಥಾನ ಪಡೆದಿದೆ. ಮಾಗಡಿ ತಾಲೂಕಿಗೆ ಶೇಕಡ 86.24ರಷ್ಟು ಮತ್ತು ರಾಮನಗರ ತಾಲೂಕಿಗೆ 82.83ರಷ್ಟು ಫಲಿತಾಂಶ ಲಭಿಸಿದೆ. ಜಿಲ್ಲೆಯ ಒಟ್ಟಾರೆ ಫಲಿತಾಂಶ 88.05 ಆಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement