ಶಾಂತಿನಿಕೇತನ ಪ್ರೌಢ ಶಾಲೆಗೆ ಶೇಕಡಾ 100
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ನಗರದ ಶಾಂತಿನಿಕೇತನ ಪ್ರೌಢಶಾಲೆಗೆ ಶೇಕಡಾ 100ರಷ್ಟು ಫಲಿತಾಂಶ ಬಂದಿದೆ. ಪರೀಕ್ಷೆಗೆ ಕುಳಿತಿದ್ದ 97 ವಿದ್ಯಾರ್ಥಿಗಳ ಪೈಕಿ 14 ಅತ್ಯುನ್ನತ ಶ್ರೇಣಿ, 60 ಪ್ರಥಮ ದರ್ಜೆ, 15 ದ್ವಿತೀಯ ದರ್ಜೆ ಹಾಗೂ 8 ವಿದ್ಯಾರ್ಥಿಗಳು ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.