ಎಂಟಿಬಿ ನಾಗರಾಜ್ ಕೈ ಬಿಡದ ಹೊಸಕೋಟೆ ಕ್ಷೇತ್ರ
ಸೂಲಿಬೆಲೆ: ಹೊಸಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಎಂಟಿಬಿ ನಾಗರಾಜ್ ಅವರನ್ನು ಕ್ಷೇತ್ರದ ಮತದಾರರು ಕೈ ಹಿಡಿದಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರಾಜಕಾರಣದಲ್ಲಿ ತನ್ನದೇ ಆದ ಹೆಸರು ಪಡೆದಿರುವ ಹೊಸಕೋಟೆ ಕ್ಷೇತ್ರವನ್ನು 2004ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರವೇಶಿಸಿದ ಎಂಟಿಬಿ ನಾಗರಾಜ್ ನಂತರದ ದಿನಗಳಲ್ಲಿ ಕ್ಷೇತ್ರದಲ್ಲಿ ಬಲಪಡಿಸಲು ಶ್ರಮಿಸಿದರು.ಹಂತ ಹಂತವಾಗಿ ಮತದಾರರ ಮನಗೆದ್ದ ಇದೀಗ ಗದ್ದುಗೇ ಏರಿದ್ದಾರೆ. ಕ್ಷೇತ್ರದ ಹೋಬಳಿಗಳಲ್ಲಿ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಸುತ್ತಿ ಪಕ್ಷವನ್ನು ಕಟ್ಟಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದ ಪರಿಣಾಮ ವಿಜಯದ ನಗೆ ಬೀರಲು ಸಾಧ್ಯವಾಯಿತು.
ಯಾರಿಗೆ ಎಷ್ಟು: ಹೊಸಕೋಟೆ ಕ್ಷೇತ್ರದಲ್ಲಿ ಸ್ವರ್ಧಿಸಿ ಗೆಲವು ಸಾಧಿಸಿದ ಎಂಟಿಬಿ ನಾಗರಾಜ್ ಪಡೆದ ಮತ-85,285, ಬಿಜೆಪಿ ಬಿ.ಎನ್. ಬಚ್ಚೇಗೌಡರ ಪಡೆದ ಮತ-78,099.