ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಪಿಳ್ಳಮುನಿಶಾಮಪ್ಪಗೆ ದಕ್ಕಿದ ದೇವನಹಳ್ಳಿ

Rashmi Kasaragodu
Updated On : 9 May 2013, 12:22 pm

ದೇವನಹಳ್ಳಿ: ದೇವನಹಳ್ಳಿ ಮೀಸಲು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್‌ನ ಪಿಳ್ಳಮುನಿಶಾಮಪ್ಪರವರು ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ವೆಂಕಟಸ್ವಾಮಿರವರನ್ನು 1942 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.
ಪಿಳ್ಳಮುನಿಶಾಮಪ್ಪರವರಿಗೆ 70323 ಮತಗಳು, ವೆಂಕಟಸ್ವಾಮಿರವರಿಗೆ 68381 ಮತಗಳು ಹಾಗೂ ಬಿಜೆಪಿ ಜಿ.ಚಂದ್ರಣ್ಣರವರಿಗೆ 9418 ಮತಗಳು ಲಭ್ಯವಾಗಿವೆ.
ಚುನಾವಣೆಯಲ್ಲಿ ಒಟ್ಟು 11 ಮಂದಿ ಸ್ಪರ್ಧಿಸಿದ್ದು ಅವರಲ್ಲಿ ಬಿಎಸ್ಪಿ ಪಿ.ವೆಂಕಟೇಶ್ - 1283, ಬಿಎಸ್‌ಆರ್ ಕಾಂಗ್ರೆಸ್‌ನ ಡಿ.ಆರ್.ನಾರಾಯಣಸ್ವಾಮಿ - 1201, ಕೆಜಿಪಿ ಎ.ಹನುಮಂತಪ್ಪ- 929, ಅಕ್ಕಯ್ಯಮ್ಮ- 234, ಡಿ.ಮುನಿರಾಜು-197, ರಾಮಾನಾಯ್ಕ- 297, ಎಂ.ಶಿವಪ್ಪ- 419 ಹಾಗೂ ಕೆ.ಎಸ್.ಸ್ವಾಮಿ- 865 ಮತಗಳು ಲಭ್ಯವಾಗಿವೆ.
ಚುನಾವಣಾಧಿಕಾರಿಗಳಾದ ಆರ್. ಸುಮರವರು ವಿಜೇತರಾದ ಜೆಡಿಎಸ್‌ನ ಪಿಳ್ಳಮುನಿಶಾಮಪ್ಪರವರಿಗೆ ಪ್ರಮಾಣ ಪತ್ರ ವಿತರಿಸಿದರು. ಮತಗಳ ಎಣಿಕೆ ಸಂದರ್ಭದಲ್ಲಿ ಭಾಗವಹಿಸಿದ್ದ ವಕೀಲರ ಸಂಘದ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸಮೂರ್ತಿ, ದಲಿತ ಸಂಘಟನೆಗಳ ಮುಖಂಡರಾದ ಬುಳ್ಳಹಳ್ಳಿ ರಾಜಪ್ಪರವರು ಹಾಗೂ ಎಸ್. ಗುರಪ್ಪರವರು ಪಿಳ್ಳಮುನಿಶಾಮಪ್ಪರವರಿಗೆ ಅಭಿನಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement