ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಆನೇಕಲ್: ಶಿರಡಿ ಸಾಯಿ ಪಿಯು ಕಾಲೇಜಿಗೆ ಶೇ. 95 ಫಲಿತಾಂಶ

Rashmi Kasaragodu
Updated On : 10 May 2013, 12:27 pm

ಆನೇಕಲ್: ಆನೇಕಲ್ಲಿನ ಶಿರಡಿ ಸಾಯಿ ಎಂಜಿನಿಯರಿಂಗ್ ಕಾಲೇಜು ಕ್ಯಾಂಪಸ್‌ನ ಪಿಯು ವಿಜ್ಞಾನ ವಿಭಾಗದಲ್ಲಿ ಶೇ. 95 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಪ್ರಾಂಶುಪಾಲ ಡಾ. ಗೋವಿಂದರಾಜುಲು ತಿಳಿಸಿದ್ದಾರೆ. ಎನ್. ಕಾರುಣ್ಯ 576 ಅಂಕಗಳನ್ನು (ಶೇ. 96) ಪಡೆದು ತಾಲೂಕಿಗೇ ಮೊದಲಿಗರಾಗಿದ್ದಾರೆ. ಇತರ ನಾಲ್ಕು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 36 ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. 10 ವಿದ್ಯಾರ್ಥಿಗಳು 2ನೇ ದರ್ಜೆಯಲ್ಲಿ ಪಾಸಾಗಿದ್ದಾರೆ.
ಪ್ರಸಕ್ತ ಸಾಲಿಗೆ ಉತ್ತಮ ಕಲಿಕಾ ಉಪಕರಣಗಳು ಸುಸಜ್ಜಿತ ಲ್ಯಾಬ್ ಹಾಗೂ ನುರಿತ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗಿದೆ. ಶೇ. 100 ಫಲಿತಾಂಶ ನಮ್ಮ ಮುಂದಿನ ಗುರಿ ಎಂದರು.
ಕಡಿಮೆ ಬೆಲೆಗೆ ಉತ್ತಮ ಶಿಕ್ಷಣ: ಶಿರಡಿ ಸಾಯಿ ಕಾಲೇಜು ತನ್ನ 16ನೆಯ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕನಿಷ್ಠ ಬೆಲೆಯಲ್ಲಿ ಉತ್ಕೃಷ್ಠ ಶಿಕ್ಷಣ ಧ್ಯೇಯದೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದು 4 ವಿಭಾಗಗಳ ಆಯ್ಕೆ ವಿದ್ಯಾರ್ಥಿಗಳಿಗಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಲು ಆಡಳಿತ ಮಂಡಳಿಯ ಪಟೇಲ್, ಅರುಣ್ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement