ಓದುಗರ ಧ್ವನಿ
ಕನ್ನಡಪ್ರಭದಲ್ಲಿ ರಾಜ್ಯ ರಾಜಕಾರಣದ ಸಮಗ್ರ ಚಿತ್ರಣವನ್ನು ಗಮನ ಸೆಳೆಯುವಂತಹ ವಿಶೇಷ ಪುಟ ವಿನ್ಯಾಸದೊಂದಿಗೆ ನೀಡಲಾಗಿದೆ. ಈ ಪತ್ರಿಕೆಯ ಚುನಾವಣಾ ಸಮೀಕ್ಷೆ ನಿಜವಾಗಿರುವ ಹಿನ್ನೆಲೆಯಲ್ಲಿ ಪತ್ರಿಕೆಗೆ ಬೇಡಿಕೆಯೂ ಹೆಚ್ಚಿದೆ.
ಟಿ ಜಿ.ಶಿವಣ್ಣ ಕೊತ್ತಿಪುರ, ಉಪನ್ಯಾಸಕ, ರಾಮನಗರ
ಪತ್ರಿಕೆಯು ರಾಜಕೀಯ ವಿಶ್ಲೇಷಣೆಗಳಲ್ಲಿ ನಂ.1 ಆಗಿರುವುದು ನಿರ್ವಿವಾದ. ರಾಜ್ಯ ಚುನಾವಣೆಯ ಸಂಪೂರ್ಣ ಚಿತ್ರಣ, 223 ಶಾಸಕರ ಭಾವಚಿತ್ರದೊಂದಿಗೆ ಮತಗಳ ವಿವರ ಸಮೇತ ಪ್ರಾಂತವಾರು ಸಮಗ್ರ ರಾಜಕೀಯ ಚಿತ್ರಣವನ್ನು ಓದುಗರಿಗೆ ನೀಡಿರುವುದು ಶ್ಲಾಘನೀಯ.
ಟಿ ಗರಕಹಳ್ಳಿ ಕೃಷ್ಣೇಗೌಡ, ಚನ್ನಪಟ್ಟಣ
ಕನ್ನಡಪ್ರಭದಲ್ಲಿ ರಾಜಕೀಯವಾಗಿ ವಸ್ತುನಿಷ್ಠ ವರದಿಗಳು ಮೂಡಿ ಬಂದಿವೆ. ಪುಟ ವಿನ್ಯಾಸದೊಟ್ಟಿಗೆ ಸುದ್ದಿ ಸಂಗ್ರಹಕ್ಕೆ ವಿಶೇಷ ಒತ್ತು ನೀಡಿ, ಭವಿಷ್ಯವನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿ ವರದಿ ಮಾಡಲಾಗಿದೆ. ಚುನಾವಣೆಯಲ್ಲಿ ನೈಜ, ನಿಖರ, ನಿಸ್ಪಕ್ಷಪಾತ ಸುದ್ದಿಯೊಂದಿಗೆ ಪತ್ರಿಕೆ ಗಮನ ಸೆಳೆದಿದೆ.
ಟಿ ಸು.ತ.ರಾಮೇಗೌಡ, ಸಾಹಿತಿ ಮತ್ತು ಪತ್ರಕರ್ತ, ಚನ್ನಪಟ್ಟಣ