ಔಷಧ ವ್ಯಾಪಾರಿಗಳ ಮುಷ್ಕರ ಇಂದು
ದೇವನಹಳ್ಳಿ: ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘದ ಆದೇಶದ ಮೇರೆಗೆ ತಾಲೂಕಿನ ಎಲ್ಲ ಔಷಧ ವ್ಯಾಪಾರಿಗಳು ಮುಷ್ಕರದಲ್ಲಿ ಭಾಗವಹಿಸಿ ತಮ್ಮ ಅಂಗಡಿಗಳನ್ನು ಮುಚ್ಚಲಿದ್ದಾರೆ ಎಂದು ದೇವನಹಳ್ಳಿ ತಾಲೂಕು ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ವಿ.ನಟರಾಜಶೆಟ್ಟಿ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಹೊಸ ಔಷಧ ನೀತಿ, ಫಾರ್ಮಸಿಸ್ಟ್‌ಗಳಿಗೆ ಸಂಬಂಧಿಸಿದ ವಿಷಯದ ಪರಿಹಾರ ಬಗ್ಗೆ, ನ್ಯಾಯಸಮ್ಮತವಲ್ಲದ ಔಷಧ ಕಾಯಿದೆ 2008ರ ತಿದ್ದುಪಡಿ ಹಾಗೂ ಔಷಧ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ವಿರೋಧಿಸಿ ಮುಷ್ಕರ ನಡೆಸಲಾಗುತ್ತಿದೆ ಎಂದು ನಟರಾಜ್‌ರವರು ತಿಳಿಸಿ ಸಾರ್ವಜನಿಕರು ಸಹಕರಿಸಬೇಕೆಂದು ಹಾಗೂ ಅಗತ್ಯವಿರುವ ಔಷಧಗಳನ್ನು ಗುರುವಾರವೇ ಖರೀದಿಸಬೇಕೆಂದು ಕೋರಿದ್ದಾರೆ.