ಜೆಡಿಎಸ್ ವಿಜಯೋತ್ಸವ
ವಿಜಯಪುರ: ಕ್ಷೇತ್ರದ ವ್ಯಾಪ್ತಿಗೆ ಒಳಪಡುವ 324 ಹಳ್ಳಿಗಳಲ್ಲೂ ಮುಂಬರುವ ದಿನಗಳಲ್ಲಿ ಗ್ರಾಮ ಸಭೆಯನ್ನು ನಡೆಸಿ ಅಲ್ಲಿನ ಕುಂದು ಕೊರತೆಗಳನ್ನು ಪರಿಶೀಲಿಸಿ ಪರಿಹಾರ ಸೂಚಿಸುವುದಾಗಿ ದೇವನಹಳ್ಳಿ ಕ್ಷೇತ್ರದ ನೂತನ ಶಾಸಕ ಪಿಳ್ಳಮುನಿಶ್ಯಾಮಪ್ಪ ತಿಳಿಸಿದರು.
ಅವರು ಪಟ್ಟಣದ ಗಾಂಧಿ ಚೌಕದಲ್ಲಿ ಜೆಡಿಎಸ್ ವಿಜಯೋತ್ಸವ ಆಚರಿಸಲು ಬಂದ ಸಂದರ್ಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಪಟ್ಟಣದೆಲ್ಲೆಡೆ ಜೆಡಿಎಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು. ಗಾಂಧಿ ಚೌಕ, ಪುರಸಭಾ ವೃತ್ತ, ಶಿಡ್ಲಘಟ್ಟ ಡಿವಿಯೇಷನ್ ವೃತ್ತ, ಎಲ್ಲಮ್ಮ ದೇವಾಲಯ ವೃತ್ತ ಮುಂತಾದೆಡೆ ಜೆಡಿಎಸ್ ಕಾರ್ಯಕರ್ತರು ದ್ವಿಚಕ್ರ ವಾಹನಗಳಲ್ಲಿ ಪಕ್ಷದ ಬಾವುಟವನ್ನು ಹಿಡಿದು ಬೈಕ್ ರ್ಯಾಲಿ ನಡೆಸಿದರು. ಮುಖಂಡರಾದ ಸದಾಶಿವಪ್ಪ, ಹೋಬಳಿ ಪ್ರಚಾರ ಸಮಿತಿ ಅಧ್ಯಕ್ಷ ಚಂದ್ರಪ್ಪ, ಜೆ.ಆರ್.ಮುನಿವೀರಣ್ಣ, ಟೌನ್ ಜೆಡಿಎಸ್ ಎನ್.ನಾರಾಯಣಸ್ವಾಮಿ, ಪುರಸಭಾ ಮಾಜಿ ಅಧ್ಯಕ್ಷ ಎಂ.ಚಿನ್ನಪ್ಪ, ಎಂ.ಸುಧಾಕರ್, ಅಲ್ಪಸಂಖ್ಯಾತ ಘಟಕದ ತಾಲೂಕು ಅಧ್ಯಕ್ಷ ಸದಾಕತ್, ಪುರಸಭಾ ಸದಸ್ಯರಾದ ಕೇಶವಪ್ಪ, ಎಸ್. ಭಾಸ್ಕರ್, ಮಾಜಿ ಅಧ್ಯಕ್ಷ ರಫಿಕ್, ಕಾರ್ಯದರ್ಶಿ ಆಸೀಫ್, ಮುನಿರಾಜು, ಮಂಜುನಾಥ್ ಮತ್ತಿತರರು ಇದ್ದರು.