ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮರಸನಾಡಮ್ಮ ಜಾತ್ರಾ ಮಹೋತ್ಸವ ಆರಂಭ

Rashmi Kasaragodu
Updated On : 10 May 2013, 12:26 pm

ಕನಕಪುರ: ಕನಕಪುರ ಪಟ್ಟಣದ ಮಳಗಾಳು ಗ್ರಾಮದ ಗ್ರಾಮದೇವತೆ ಶ್ರೀ ಮರಸನಾಡಮ್ಮ ಜಾತ್ರಾ ಮಹೋತ್ಸವ ಮಂಗಳವಾರ ವಿಧ್ಯುಕ್ತವಾಗಿ ಪ್ರಾರಂಭಗೊಂಡಿತು.
ಅಲಂಕರಿಸಿದ ಬಂಡಿಗಳಲ್ಲಿ ಅಗ್ನಿಕೊಂಡೋತ್ಸವ ನಡೆಸಲು ಸೌಧೆಗಳನ್ನು ತುಂಬಿಕೊಂಡು ಬಂದ ಚಕ್ಕಡಿಗಳನ್ನು ಸುಮಂಗಲಿಯರು ಆರತಿ ಬೆಳಗಿ ಸ್ವಾಗತಿಸಿದರು. ಮಳಗಾಳು ಗ್ರಾಮದ ನೆರೆಹೊರೆಯ ಹಳ್ಳಿಗಳಿಂದ ಎತ್ತಿನ ಗಾಡಿಗಳಲ್ಲಿ ಬರುವ ಕಟ್ಟಿಗೆ, ಸೌಧೆಯನ್ನು ಕೊಂಡದಲ್ಲಿ ಒಡ್ಡಿ ಕೆಂಡವನ್ನಾಗಿಸುವ ಕ್ರಿಯೆಗೆ ಚಾಲನೆ ನೀಡಲಾಯಿತು.
ಮೇ 8 ರಂದು ಬೆಳಗ್ಗೆ 6 ಗಂಟೆಗೆ ಮರಸನಾಡಮ್ಮ ದೇವರ ಅಗ್ನಿಕೊಂಡೋತ್ಸವ ನಡೆಯಲಿದೆ. ಅಂದು ರಾತ್ರಿ ಮಳಗಾಳು ಗ್ರಾಮ ಹಾಗೂ ಕನಕಪುರ ಪಟ್ಟಣದಲ್ಲಿ ವಿಜೃಂಭಣೆಯ ರಥೋತ್ಸವ ನಡೆಯುತ್ತದೆ. ಮೇ 9 ರಂದು ಸಂಜೆ ಜಾತ್ರೆ ಅಂಗವಾಡಿ ನಡೆಯುವ ಸಿಡಿ ಉತ್ಸವದಲ್ಲಿ ಭಕ್ತಾದಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಗ್ರಾಮಸ್ಥರಾದ ಮರಸಪ್ಪರವಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement