ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಯನಗುಂಟೆಯಲ್ಲಿ ಅಂಬೇಡ್ಕರ್ ಪ್ರತಿಮೆಗೆ ಅಪಮಾನ

Rashmi Kasaragodu
Updated On : 10 May 2013, 12:26 pm

ಕ.ಪ್ರ. ವಾರ್ತೆ   ಸೂಲಿಬೆಲೆ   ಮೇ 9
ಇಲ್ಲಿಗೆ ಸಮೀಪದ ಯನಗುಂಟೆ ಗ್ರಾಮದಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆಗೆ ಸಗಣಿ ಹಾಕಿ ಅಪಮಾನ ಮಾಡಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.
ಘಟನೆಯ ಸಂಬಂಧ ಗ್ರಾಮದ ದಲಿತ ಮುಖಂಡ ವೈ.ಎಂ.ರಾಮಕೃಷ್ಣಪ್ಪ ಸೂಲಿಬೆಲೆ ಪೊಲೀಸರಿಗೆ ದೂರು ನೀಡಿದ್ದಾರೆ.
ಯನಗುಂಟೆ ಗ್ರಾಮದ ದಲಿತರ ಕಾಲೋನಿಯ ಮಧ್ಯ ಭಾಗದಲ್ಲಿ ಜಿಲ್ಲಾಡಳಿತದ ವತಿಯಿಂದ  ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಿ ಅದರ ಸುತ್ತ ಭದ್ರತೆಗಾಗಿ ಕಬ್ಬಿಣದ ಗ್ರೀಲ್ ಅಳವಡಿಸಲಾಗಿದೆ. ಮೇ 7 ರಂದು ರಾತ್ರಿವೇಳೆ ಫಿರ್ಯಾದಿ ರಾಮಕೃಷ್ಣಪ್ಪನ ಮನೆ ಮುಂದೆ ಯನಗುಂಟೆ ಗ್ರಾಮದ ವಸಂತ್ ಕುಮಾರ್, ರಾಜ, ಸತೀಶ್, ಸುರೇಶ್, ಸುನೀಲ್, ಚೇತನ್, ಗಂಗಾಧರ್, ಮಧು, ಮನ ಮತ್ತು ನಾರಾಯಣಸ್ವಾಮಿ ಗುಂಪುಗೂಡಿಕೊಂಡು ಹೋಗುತ್ತಿದ್ದಾಗ ಎದುರಿಗೆ ಬಂದ ಪೊಲೀಸ್ ಜೀಪ್ ಕಂಡು ರಾಮಕೃಷ್ಣಪ್ಪನನ್ನು ಗುರಾಯಿಸಿದ್ದರು. ಮರುದಿನ ಬೆಳಿಗ್ಗೆ ಮೇ 8ರಂದು ಸುರೇಶ್ ಎಂಬುವರು ಪೋನ್ ಮಾಡಿ ಅಂಬೇಡ್ಕರ್ ಪ್ರತಿಮೆಗೆ ಸಗಣಿ ಹಾಕಿದ್ದಾರೆ ಎಂದು ತಿಳಿಸಿದ್ದು ನೋಡಲಾಗಿ ಸಗಣಿ ಎರೆಚಿದ್ದು ನಿಜವಾಗಿತ್ತು.ದಲಿತ ವರ್ಗಕ್ಕೆ ಅವಮಾನ ಮಾಡುವ ಉದ್ದೇಶದಿಂದ ಹಾಗೂ ವೈಯುಕ್ತಿಕ ದ್ವೇಷವನ್ನು ಸಾಧಿಸಿ ಮೇಲ್ಕಂಡವರೇ ಸಗಣಿ ಹಾಕಿರುತ್ತಾರೆ ಎಂಬ ಗುಮಾನಿಯಿದೆ ಎಂದು ರಾಮಕೃಷ್ಣಪ್ಪ ಸೂಲಿಬೆಲೆ ಪೊಲೀಸರಿಗೆ ದೂರು ನೀಡಿದ್ದು, ಮೇಲ್ಕಂಡ 11 ಜನರ ಮೇಲೆ ಪ್ರಕರಣ ದಾಖಲಾಗಿದೆ. ಯನಗುಂಟೆ ಗ್ರಾಮದಲ್ಲಿರುವ ಪ್ರತಿಮೆಗೆ ಈ ರೀತಿಯಾಗಿ ಸಗಣಿ ಹಾಕುತ್ತಿರುವುದು ಮೂರನೇ ಬಾರಿಯಾಗಿದ್ದು, ಪದೇ ಪದೇ ಈ ಘಟನೆ ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ದಲಿತ ಸಂಘಟನೆಗಳು ಒತ್ತಾಯಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement