ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

24ನೇ ವಾರ್ಷಿಕೋತ್ಸವ ಅದ್ಧೂರಿ ಸಮಾರಂಭ

Rashmi Kasaragodu
Updated On : 11 May 2013, 1:00 am

ವಿಜಯಪುರ: ಪಟ್ಟಣ ಸಮೀಪದ ಪುರ ಹಾಗೂ ಚಂದೇನಹಳ್ಳಿ ಮಧ್ಯಭಾಗದಲ್ಲಿರುವ ಶ್ರೀ ಶನೇಶ್ವರ ಸ್ವಾಮಿ ಸನ್ನಿದಿಯಲ್ಲಿರುವ ಶ್ರೀ ಆದಿಪರಾಶಕ್ತಿ ಅಮ್ಮನವರ, ಶ್ರೀ ಪ್ರಸನ್ನಾಂಜನೇಯ ಸ್ವಾಮಿಯವರ 24ನೇ ವಾರ್ಷಿಕೋತ್ಸವ ಸಮಾರಂಭವು ಅವಳಿ ಗ್ರಾಮಗಳಲ್ಲಿ ನಡೆಯಿತು.
ಎರಡು ದಿನಗಳ ಕಾಲ ನಡೆದ ಪೂಜಾ ಧಾರ್ಮಿಕ ಕಾರ್ಯಕ್ರಮದಲ್ಲಿ ಗಣಪತಿ ಹೋಮ, ನವಗ್ರಹ
ಆರಾಧನೆ, ದುರ್ಗಾ ಹೋಮ ಹಾಗೂ ಅನ್ನಸಂತರ್ಪಣೆ ನಡೆಯಿತು. ಮೂಲ ವಿಗ್ರಹಗಳಿಗೆ ಬೆಣ್ಣೆ ಅಲಂಕಾರದೊಂದಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ವಾರ್ಷಿಕೋತ್ಸವ ಅಂಗವಾಗಿ ಶ್ರೀ ಮಾರುತಿ ಕೃಪಾ ಪೋಷಿತ ನಾಟಕ ಮಂಡಳಿ ಹಾಗೂ ಸೂರ್ಯಸುತಾ ಭಕ್ತ ಮಂಡಳಿ ವತಿಯಿಂದ ಕೆ.ವೆಂಕಟೇಶಪ್ಪ ಅವರ ನಿರ್ದೇಶನದಲ್ಲಿ ರಾಜಾ ಸತ್ಯವ್ರತಾ ಮತ್ತು ಶನಿ ಪ್ರಭಾವ ಎಂಬ ಪೌರಾಣಿಕ ನಾಟಕಗಳನ್ನು ಏರ್ಪಡಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement