ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕಾಂಗ್ರೆಸಿಗರಿಗೆ ಮತದಾರರ ತಕ್ಕ ಉತ್ತರ

Rashmi Kasaragodu
Updated On : 11 May 2013, 1:00 am

ಕ.ಪ್ರ. ವಾರ್ತೆ  ರಾಮನಗರ  ಮೇ 10
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೊರಗಿನವರು. ಅವರನ್ನು ರಾಮನಗರದಿಂದ ಗಂಟು ಮೂಟೆ ಕಟ್ಟಿಸುತ್ತೇವೆಂದು ಬಾಲಿಶವಾಗಿ ಟೀಕಿಸುತ್ತಿದ್ದ ಕಾಂಗ್ರೆಸಿಗರಿಗೆ ಮತದಾರರು ತಕ್ಕ ಉತ್ತರ ನೀಡಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ರಾಜು ಹೇಳಿದರು.
ರಾಮನಗರದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ಕಳೆದ 20 ವರ್ಷದಿಂದ ಸಕ್ರಿಯ ರಾಜಕಾರಣ ಮಾಡಿಕೊಂಡು ಬಂದಿದೆ. ಅದರಲ್ಲೂ ಕುಮಾರಸ್ವಾಮಿ ರಾಮನಗರವನ್ನು ಜಿಲ್ಲೆಯಾಗಿ ರಚಿಸಿ, ಹಲವಾರು ಕೊಡುಗೆ ನೀಡಿದ್ದಲ್ಲದೆ ಇಲ್ಲಿ ಮನೆ ಮಗ ಎನಿಸಿಕೊಂಡಿದ್ದಾರೆ. ರಾಮನಗರದ ಜನತೆಯ ಹೃದಯದಲ್ಲಿರುವ ಅವರನ್ನು ಯಾವ ಕಾರಣಕ್ಕೂ ಕಿತ್ತೊಗೆಯಲಾಗದು ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸಿಗರಿಗೆ ಎದಿರೇಟು ನೀಡಿದರು.
ರಾಜ್ಯಾದ್ಯಂತ ಬಿಡುವಿಲ್ಲದ ಪ್ರಚಾರದಲ್ಲಿ ನಿರತರಾಗಿದ್ದ ಕುಮಾರಸ್ವಾಮಿ ಕ್ಷೇತ್ರದಲ್ಲಿ ಪ್ರಚಾರವನ್ನೇ ನಡೆಸದೆ ಜಯಗಳಿಸಿರುವುದು ಅವರ ಪ್ರಾಬಲ್ಯಕ್ಕೆ ಸಾಕ್ಷಿಯಾಗಿದೆ. ನಾವು ನಿರೀಕ್ಷಿಸಿದ್ದಕ್ಕಿಂತ 5 ಸಾವಿರ ಮತಗಳಷ್ಟೇ ಕಡಿಮೆಯಾಗಿವೆ. ಕಾಂಗ್ರೆಸ್ ಅಪಪ್ರಚಾರಕ್ಕೆ ಮತದಾರರು ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ ಎಂದು ರಾಜು ತಿಳಿಸಿದರು.  
ಕುಮಾರಸ್ವಾಮಿ ಅವರಿಗೆ 80 ಸಾವಿರಕ್ಕೂ ಹೆಚ್ಚು ಮತದಾರರು ಆಶೀರ್ವದಿಸಿ, ಅಭೂತಪೂರ್ವ ಜಯ ತಂದುಕೊಟ್ಟಿದ್ದಾರೆ. ಮತ ನೀಡಿದವರು, ಕುಮಾರಸ್ವಾಮಿ ಪರ ದುಡಿದ ಕಾರ್ಯಕರ್ತರು ಮತ್ತು ಮುಖಂಡರಿಗೆ ಕತಜ್ಞತೆ ಸಲ್ಲಿಸುವುದಾಗಿ ಅವರು ಹೇಳಿದರು.  ಗೋಷ್ಠಿಯಲ್ಲಿ ಕೆ.ದೇವೇಗೌಡ, ರಾಜಶೇಖರ್, ಆರ್.ಎ.ಮಂಜುನಾಥ್, ರಾ.ಶಿ. ದೇವರಾಜು ಮತ್ತಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement