ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕೊಂಗಾಡಿಯಪ್ಪ ಕಾಲೇಜಿನ 27 ವಿದ್ಯಾರ್ಥಿಗಳು ಅಗ್ರಶ್ರೇಣಿ

Rashmi Kasaragodu
Updated On : 11 May 2013, 1:01 am

ಕ.ಪ್ರ. ವಾರ್ತೆ, ದೊಡ್ಡಬಳ್ಳಾಪುರ, ಮೇ 10
ಇಲ್ಲಿನ ಕೊಂಗಾಡಿಯಪ್ಪ ಪದವಿ ಪೂರ್ವ ಕಾಲೇಜಿಗೆ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.75.31 ಫಲಿತಾಂಶ ಲಭ್ಯವಾಗಿದೆ.
 ಕಾಲೇಜಿನಲ್ಲಿ ಪರೀಕ್ಷೆ ತೆಗೆದುಕೊಂಡಿದ್ದ 482 ವಿದ್ಯಾರ್ಥಿಗಳ ಪೈಕಿ 353 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಶೇ.73, ವಾಣಿಜ್ಯ ವಿಭಾಗದಲ್ಲಿ ಶೇ.76.96 ಮತ್ತು ಕಲಾ ವಿಭಾಗದಲ್ಲಿ ಶೇ.67.7 ಫಲಿತಾಂಶ ದೊರೆತಿದೆ ಎಂದು ಪ್ರಾಂಶುಪಾಲ ಮೇಜರ್ ಮಹಾಬಲೇಶ್ವರ್ ತಿಳಿಸಿದ್ದಾರೆ.
ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ 12, ವಾಣಿಜ್ಯ ವಿಭಾಗದಲ್ಲಿ 14 ಮತ್ತು ಕಲಾ ವಿಭಾಗದಲ್ಲಿ ಒಬ್ಬ ವಿದ್ಯಾರ್ಥಿನಿ ಸೇರಿದಂತೆ ಒಟ್ಟು 27 ಮಂದಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 117 ಮಂದಿ ಪ್ರಥಮ ದರ್ಜೆ ಪಡೆದಿದ್ದಾರೆ.
ಅಗ್ರಶ್ರೇಯಾಂಕಿತರು: ವಿಜ್ಞಾನ ವಿಭಾಗದ ಎನ್.ಚಂದ್ರಿಕಾ-567, ಎಚ್.ವಿ.ಶ್ರೀಹರ್ಷ-562, ಕೆ.ಭಾರ್ಗವರಾಮ-551, ಎಚ್.ಆರ್.ಕಾರ್ತಿಕ್-550, ವಿ.ಮಂಜುನಾಥ್-533, ಕೆ.ಆರ್.ರಾಘವೇಂದ್ರ-530, ಎಂ.ಎಂ.ಅಂಜಲಿ-523, ಅಖಿಲಾ ಆರ್.ಶೆಟ್ಟಿ-518, ಫರ್ಹೀನ್-518, ಆರ್.ನವೀನ್‌ಕುಮಾರ್-516, ಕೆ.ಸಿ.ವರ್ಷ-516 ಮತ್ತು ಡಿ.ಎಸ್.ಕವಿತ-514 ಅಂಕ ಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ವಿ.ನಂದಿನಿ-556, ವಿ.ನಯನ-555, ವೈ.ಎಂ.ರಕ್ಷಿತ-548, ಡಿ.ವಿ.ಅಶ್ವಿನಿ-544, ಡಿ.ಆರ್.ಮೋಹನ್‌ಕುಮಾರ್-544, ಬಿ.ಎಸ್.ಯಶ್ವಂತ್-543, ಎಸ್.ಸುರೇಶ್-540, ಜೆ.ದಿವ್ಯ-540, ಡಿ.ಎ.ಶ್ವೇತರಾಣಿ-534, ಪಿ.ಎ.ಅಶ್ವಿನಿ-529, ಡಿ.ಎಸ್.ಸೌಜನ್ಯ-524, ಎನ್.ರಾಕೇಶ್-517, ವಿ.ತನುಜ-515, ಹರ್ಷಿತ ಜೈನ್-513 ಮತ್ತು ಕಲಾ ವಿಭಾಗದಲ್ಲಿ ಡಿ.ಎಸ್.ಮಮತಾ ಕುಮಾರಿ-516 ಅಂಕಗಳನ್ನು ಪಡೆದು ಅಗ್ರಶ್ರೇಣಿ ಪಡೆದಿದ್ದಾರೆ.
100ಕ್ಕೆ 100ಣ ಕಾಲೇಜಿನ 7 ಮಂದಿ ವಿದ್ಯಾರ್ಥಿಗಳು ಕೆಲ ವಿಷಯಗಳಲ್ಲಿ 100ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ. ಲೆಕ್ಕಶಾಸ್ತ್ರದಲ್ಲಿ ಬಿ.ವಾಣಿ, ವಿ.ನಂದಿನಿ, ವಿ.ನಯನ, ವೈ.ಎಂ.ರಕ್ಷಿತ, ಡಿ.ವಿ.ಅಶ್ವಿನಿ, ಬಿ.ಎಸ್.ಯಶ್ವಂತ್, ಭೌತಶಾಸ್ತ್ರದಲ್ಲಿ ಎಚ್.ವಿ.ಶ್ರೀಹರ್ಷ, ಗಣಕ ವಿಜ್ಞಾನದಲ್ಲಿ ಡಿ.ಆರ್.ಮೋಹನ್‌ಕುಮಾರ್ 100ಕ್ಕೆ 100 ಅಂಕಗಳನ್ನು ಪಡೆದ ಸಾಧನೆ ಮಾಡಿದ್ದಾರೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement