ಗ್ರಾಮವಿದ್ಯಾಪ್ರಚಾರಕ ಸಂಘದ ಪ್ರೌಢಶಾಲೆ ಉತ್ತಮ ಪ್ರದರ್ಶನ
ಕ.ಪ್ರ. ವಾರ್ತೆ ಕನಕಪುರ ಮೇ 10
ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶಗಳಲ್ಲಿ ಕನಕಪುರದ ಗ್ರಾಮವಿದ್ಯಾಪ್ರಚಾರಕ ಸಂಘದ ಪ್ರೌಢಶಾಲೆಗಳು ಉತ್ತಮ ಸಾಧನೆ ಮೆರೆದಿವೆ.
ಕನಕಪುರದ ಗ್ರಾಮಾಂತರ ಬಾಲಕಿಯರ ಪ್ರೌಢಶಾಲೆಯಲ್ಲಿ ಪರೀಕ್ಷೆಗೆ ಕುಳಿತ 281 ವಿದ್ಯಾರ್ಥಿನಿಯರಲ್ಲಿ 261 ಮಂದಿ ತೇರ್ಗಡೆ ಹೊಂದಿದ್ದಾರೆ. ಅವುಗಳಲ್ಲಿ 9 ಉನ್ನತ ಶ್ರೇಣಿ, 113 ಪ್ರಥಮ ದರ್ಜೆ, 56 ದ್ವಿತೀಯ, 83 ತೃತೀಯದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಗ್ರಾಮಾಂತರ ವಿವಿಧೋದ್ದೇಶ ಪ್ರೌಢಶಾಲೆಯಲ್ಲಿ 295 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು ಅವರಲ್ಲಿ 247 ಮಂದಿ ಉತ್ತೀರ್ಣರಾಗಿದ್ದಾರೆ. 01 ಉನ್ನತಶ್ರೇಣಿ, 53 ಪ್ರಥಮದರ್ಜೆ,57 ದ್ವಿತೀಯ ದರ್ಜೆ 136 ತೃತೀಯದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇದೇಸಂಸ್ಥೆ ಸಾತನೂರು ಗ್ರಾಮದಲ್ಲಿ ನಡೆಸುತ್ತಿರುವ ಗ್ರಾಮಾಂತರ ಪ್ರೌಢಶಾಲೆಯಲ್ಲಿ 34 ಪ್ರಥಮ ದರ್ಜೆ, 37 ದ್ವಿತೀಯದರ್ಜೆ ಹಾಗೂ 71 ತೃತೀಯದರ್ಜೆ ಫಲಿತಾಂಶ ದಾಖಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಕೆ.ಜಿ.ತಿಮ್ಮಪ್ಪ ತಿಳಿಸಿದ್ದಾರೆ.
ಕನಕಪುರದ ಎಕ್ಸ್ಮುನಿಸಿಪಲ್ ಸರ್ಕಾರಿ ಪ್ರೌಢಶಾಲೆಯಲ್ಲಿ ಶೇ.84.33 ಫಲಿತಾಂಶ ದಾಖಲಾಗಿದ್ದು, 12 ಮಂದಿ ಪ್ರಥಮದರ್ಜೆ, 15 ದ್ವಿತೀಯದರ್ಜೆ ಹಾಗೂ 43 ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಮುಖ್ಯ ಶಿಕ್ಷಕಿ ಸ್ವರೂಪಾ ಬಾಲಕೃಷ್ಣ ತಿಳಿಸಿದ್ದಾರೆ.