ನೂತನ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿಗೆ ಸನ್ಮಾನ
ಕ.ಪ್ರ. ವಾರ್ತೆ ನೆಲಮಂಗಲ ಮೇ 10
ನೂತನವಾಗಿ ಆಯ್ಕೆಯಾದ ಕ್ಷೇತ್ರದ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಅವರಿಗೆ ತಾಲೂಕಿನ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.
ನೂತನ ಶಾಸಕರು ಸನ್ಮಾನ ಸ್ವೀಕರಿಸಿ ನೌಕರರನ್ನು ಉದ್ದೇಶಿಸಿ ಮಾತನಾಡುತ್ತಾ ತಾಲೂಕಿನ ರೈತರ ಹಾಗೂ ಸಾರ್ವಜನಿಕರ ಕೆಲಸಗಳು ಸುಲಲಿತವಾಗಿ ನಿರ್ವಹಿಸುವಂತೆ ಹೇಳಿದರು. ಸರ್ಕಾರಿ ನೌಕರರಿಗೆ ಅಗತ್ಯ ಬೆಂಬಲ ನೀಡುತ್ತೇವೆ ಎಂದು ನುಡಿದರು. ನೌಕರರ ಸಂಘದ ಪದಾಧಿಕಾರಿಗಳಾದ ಕಾರ್ಯದರ್ಶಿ ಬಿರಾದರ್, ರಾಜ್ಯ ಪರಿಷತ್ ಸದಸ್ಯ ರೇವಣ್ಣಸಿದ್ದಯ್ಯ, ಕಂದಾಯ ಇಲಾಖೆ ಸಂಘದ ಅಧ್ಯಕ್ಷ ಗಂಗಾಧರ್, ಬಿ.ಇ.ಓ ಹನುಮನಾಯಕ್, ಪಿ.ಡಿ.ಓಗಳಾದ ರೇಖಾ, ಮೋಹನ್, ಶಿಕ್ಷಕರ ಸಂಘದ ಅಧ್ಯಕ್ಷ ಜಿ.ವಿ.ಕುಮಾರ್, ಮುಖಂಡರಾದ ಭೀಮರಾಜ್, ನಾಗೇಶ್ ಸೇರಿದಂತೆ ನೂರಾರು ಜನ ಇದ್ದರು.