ವಿವೇಕಾನಂದ ಪ್ರೌಢಶಾಲೆಗೆ ಶೇ.88 ಫಲಿತಾಂಶ
ಸೂಲಿಬೆಲೆ: ಇಲ್ಲಿನ ವಿವೇಕಾನಂದ ಪ್ರೌಢಶಾಲೆ 2012-13 ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.88 ರಷ್ಟು ಫಲಿತಾಂಶವನ್ನು ಪಡೆದುಕೊಂಡಿದೆ.
ಪರೀಕ್ಷೆಯನ್ನು ಎದುರಿಸಿದ ಶಾಲೆಯ 218 ವಿದ್ಯಾರ್ಥಿಗಳ ಪೈಕಿ 173 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಪೂರ್ಣಶ್ರೀ ಶೇ.90.7 ರಷ್ಟು ಅಂಕಪಡೆದು ಶಾಲೆಗೆ ಕೀರ್ತಿ ತಂದಿದ್ದಾಳೆ. ಇನ್ನೂ ಉಳಿದಂತೆ 29 ಮಂದಿ ಪ್ರಥಮ ದರ್ಜೆಯಲ್ಲಿ, 35 ಮಂದಿ ದ್ವೀತಿಯ ದರ್ಜೆಯಲ್ಲಿ ಹಾಗೂ 109 ಮಂದಿ ತೃತೀಯ ಮತ್ತು ಒಬ್ಬ ವಿದ್ಯಾರ್ಥಿ ಸಾಮಾನ್ಯ ದರ್ಜೆಯಲ್ಲಿ ಪಾಸಾಗಿದ್ದಾನೆ. ಕಳೆದ ವರ್ಷಕ್ಕೆ ಹೊಲಿಸಿದರೇ ಶಾಲೆಯ ಫಲಿತಾಂಶದಲ್ಲಿ ಪ್ರಗತಿ ಕಂಡಿದೆ ಎಂದು ಮುಖ್ಯ ಶಿಕ್ಷಕ ಎಲ್. ನಾಗರಾಜ್ ತಿಳಿಸಿದ್ದಾರೆ.