ಸೂಲಿಬೆಲೆ ಕಾಲೇಜಿಗೆ ಶೇ.71.25 ಫಲಿತಾಂಶ
ಸೂಲಿಬೆಲೆ: ಇಲ್ಲಿನ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿಗೆ 2012-13 ಸಾಲಿನ ಪರೀಕ್ಷೆಯಲ್ಲಿ ಶೇ.71.25 ರಷ್ಟು ಫಲಿತಾಂಶ ಬಂದಿದೆ.
ಪರೀಕ್ಷೆಯನ್ನು ಎದುರಿಸಿದ 183 ವಿದ್ಯಾರ್ಥಿಗಳಲ್ಲಿ 131 ವಿದ್ಯಾರ್ಥಿಗಳು ಪಾಸಾಗಿದ್ದಾರೆ. 36 ಪ್ರಥಮ, 48 ದ್ವಿತೀಯ, 47 ತೃತೀಯ ಸ್ಥಾನದಲ್ಲಿ ತೇರ್ಗಡೆಯಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಶೇ.68 ರಷ್ಟು ಫಲಿತಾಂಶ ಬಂದಿದೆ. ಕಳೆದ ವರ್ಷ ಶೇ.66 ರಷ್ಟು ಬಂದಿದ್ದು, ಈ ಬಾರಿ ಪ್ರಗತಿ ಕಂಡಿದೆ ಎಂದು ಉಪನ್ಯಾಸಕ ಹನುಮಂತರಾಯಪ್ಪ ತಿಳಿಸಿದ್ದಾರೆ.