ಸೇಂಟ್ ಆನ್ಸ್ ಉತ್ತಮ ಸಾಧನೆ
ಕನ್ನಡಪ್ರಭ ವಾರ್ತೆ ನೆಲಮಂಗಲ ಮೇ 10
ಪಟ್ಟಣದಲ್ಲಿರುವ ಸೇಂಟ್ ಆನ್ಸ್ ಆಂಗ್ಲಶಾಲೆಯ ವಿದ್ಯಾರ್ಥಿನಿ ಗೌರವ್.ಕೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಒಟ್ಟಾರೆ 610 ಅಂಕಗಳನ್ನು ಗಳಿಸುವ ಮೂಲಕ ಶೇ.97.60 ಅಂಕಗಳನ್ನು ಪಡೆದು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ದ್ವಿತೀಯ ಸ್ಥಾನ ಗಳಿಸಿದ್ದಾನೆ.
ಹಿಮಾಂಶು.ಪಿ ಎಂಬ ವಿದ್ಯಾರ್ಥಿ 602 ಅಂಕಗಳನ್ನು ಗಳಿಸುವ ಮೂಲಕ ಶೇ.96.32 , ರಾಹುಲ್.ಎನ್.ಯು ಎಂಬ ವಿದ್ಯಾರ್ಥಿ 599 ಅಂಕಗಳನ್ನು ಗಳಿಸುವ ಮೂಲಕ ಶೇ.95.84, ಜನಮೃತ್.ಯು ಎಂಬ ವಿದ್ಯಾರ್ಥಿ 592 ಅಂಕಗಳನ್ನು ಗಳಿಸುವ ಮೂಲಕ ಶೇ.94.72 , ವಸುಧಾ.ಸಿ ಎಂಬ ವಿದ್ಯಾರ್ಥಿನಿ 586 ಅಂಕಗಳನ್ನು ಗಳಿಸುವ ಮೂಲಕ ಶೇ.93.76 ಪಡೆದು ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ. ಈ ಶಾಲೆಯು ಶೇ.100 ರಷ್ಟು ಫಲಿತಾಂಶ ಪಡೆದಿದೆ ಎಂದು ಪ್ರಾಂಶುಪಾಲರಾದ ಸಿಸ್ಟರ್ ಸಾಲಿಡ್ ಸಿಕ್ವೇರಾ ತಿಳಿಸಿದ್ದಾರೆ. ಹೆಚ್ಚಿನ ಅಂಕಗಳನ್ನು ಗಳಿದ ವಿಧ್ಯಾರ್ಥಿಗಳಿಗೆ ಶಿಕ್ಷಕರಾದ ಸ್ಟೀಫನ್, ಹರಿಪ್ರಸಾದ್, ಮಂಜು, ಆನಂದ್, ಚಂದ್ರಶೇಖರ್, ಜಾನೆಟ್ ಅಭಿನಂದಿಸಿದ್ದಾರೆ.