ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಹೊಸಕೋಟೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 80.76 ಫಲಿತಾಂಶ

Rashmi Kasaragodu
Updated On : 11 May 2013, 1:00 am

ಕ.ಪ್ರ. ವಾರ್ತೆ  ಹೊಸಕೋಟೆ  ಮೇ 10
ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ತಾಲೂಕಿನ ಒಟ್ಟು 54 ಶಾಲೆಗಳಿಂದ 3622 ವಿದ್ಯಾರ್ಥಿಗಳು ಹಾಜರಾಗಿದ್ದು 2925 ಮಂದಿ ಉತ್ತೀರ್ಣಗೊಂಡು ಶೇ.80.76ರಷ್ಟು ಫಲಿತಾಂಶಗಳಿಸಿಕೊಂಡಿದೆ ಎಂದು ಬಿಇಒ ಬಸವರಾಜೇಗೌಡ ತಿಳಿಸಿದ್ದಾರೆ.
1777 ಬಾಲಕಿಯರಲ್ಲಿ 1497(ಶೇ.84.24) ಉತ್ತೀರ್ಣರಾಗಿ ಮೇಲುಗೈ ಸಾಧಿಸಿದ್ದಾರೆ. 1845 ಬಾಲಕರಲ್ಲಿ 1428(ಶೇ.77.40) ತೇರ್ಗಡೆ ಹೊಂದಿದ್ದಾರೆ. 20 ಸರಕಾರಿ ಶಾಲೆಗಳಿಂದ 1804 ವಿದ್ಯಾರ್ಥಿಗಳಲ್ಲಿ 1367 (ಶೇ.75.78), 6 ಅನುದಾನಿತ ಶಾಲೆಗಳಿಂದ 599 ರಲ್ಲಿ 474 (ಶೇ.79.13), 28 ಖಾಸಗಿ ಶಾಲೆಗಳಿಂದ 1219 ರಲ್ಲಿ 1084 (ಶೇ.88.93) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕೊರಟೆ ಸರಕಾರಿ ಪ್ರೌಢಶಾಲೆ ಹಾಗೂ ಸೂಲಿಬೆಲೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಶೇ.100ರಷ್ಟು ಫಲಿತಾಂಶ ಪಡೆದಿವೆ. ಖಾಸಗಿ ಶಾಲೆಗಳಲ್ಲಿ ಪಟ್ಟಣದ ವಿವೇಕಾನಂದ ವಿದ್ಯಾಕೇಂದ್ರ, ಫಾತಿಮಾ ಪ್ರೌಢಶಾಲೆ, ಭೀಮಕ್ಕನಹಳ್ಳಿಯ ನ್ಯೂ ಹೊರೈಜಾನ್ ಪ್ರೌಢಶಾಲೆ, ನಂದಗುಡಿಯ ಗ್ರೀನ್ ವ್ಯಾಲಿ ಪ್ರೌಢಶಾಲೆ, ಸಂಘಮಿತ್ರ ಪ್ರೌಢಶಾಲೆ, ಜಡಿಗೇನಹಳ್ಳಿಯ ತಕ್ಷಶಿಲಾ ಪ್ರೌಢಶಾಲೆ, ದೊಡ್ಡದುನ್ನಸಂದ್ರದ  ಪ್ರೌಢಶಾಲೆ, ಕೊಳತೂರಿನ ಕೆಎಂಸಿ ಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆದಿವೆ.
ತಾಲೂಕಿಗೆ ಹೆಚ್ಚು ಅಂಕ ಪಡೆದವರು: ಭೀಮಕ್ಕನಹಳ್ಳಿಯ ನ್ಯೂಹೊರೈಜಾನ್ ಪ್ರೌಢಶಾಲೆಯ ಎನ್. ನವ್ಯಶ್ರೀ 604(96.64)ಪ್ರಥಮ ಸ್ಥಾನ,ಪಟ್ಟಣದ ಸಿಟಿಜನ್ ಶಾಲೆಯ ಬಿ.ಊಹಾ, ಆರ್.ರೋಹಿತ್, ವಿ.ಕೆ.ಸ್ವಾತಿ 599 (ಶೇ.95.84)ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ, ವಿವೇಕಾನಂದ ವಿದ್ಯಾಕೇಂದ್ರದ ಎಸ್.ಲಕ್ಷ್ಮಿ 592(ಶೇ.94.72) ಅಂಕ ಪಡೆದು ತೃತಿಯ ಸ್ಥಾನ ಪಡೆದುಕೊಂಡಿದ್ದಾರೆ. ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಶೇ.90ಕ್ಕಿಂತಲೂ ಹೆಚ್ಚಿನ ಫಲಿತಾಂಶ ಪಡೆದಿರುವ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರನ್ನು ಇಲಾಖೆ ವತಿಯಿಂದ ಗೌರವಿಸಲಾಗುವುದು ಎಂದು ಬಿಇಒ ತಿಳಿಸಿದ್ದಾರೆ.
ಬ್ರೈಟ್ ಶಾಲೆ: ಪಟ್ಟಣದ ಬ್ರೈಟ್ ಶಾಲೆಯಲ್ಲಿ ಪರೀಕ್ಷೆಗೆ ಹಾಜರಾದ 28ರಲ್ಲಿ 27 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದು, ಶೇ.96.43ರಷ್ಟು ಫಲಿತಾಂಶ ಪಡೆದಿದೆ. 15 ಪ್ರಥಮ, 5ದ್ವಿತೀಯ, 7 ತೃತೀಯ ದರ್ಜೆಗಳಿಸಿದೆ. ವಿವೇಕಾನಂದ ವಿದ್ಯಾಕೇಂದ್ರ ಶೇ.100 ಫಲಿತಾಂಶ ಪಟ್ಟಣದ ಸ್ವಾಮಿ ವಿವೇಕಾನಂದ ವಿದ್ಯಾಕೇಂದ್ರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸತತವಾಗಿ ಮೂರನೇ ಬಾರಿ ಶೇ.100ರಷ್ಟು ಫಲಿತಾಂಶ ಪಡೆದಿದೆ. ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಪರೀಕ್ಷಗೆ ಹಾಜರಾದ ಎಲ್ಲಾ 111 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ 10 ಅತ್ಯುನ್ನತ ಶ್ರೇಣಿ, 46 ಪ್ರಥಮ ದರ್ಜಿ 12 ದ್ವಿತೀಯ ದರ್ಜೆ, 5 ತೃತೀಯ  ದರ್ಜೆಗಳಿಸಿದ್ದು, ಕನ್ನಡ ಮಾಧ್ಯಮದಲ್ಲಿ 17 ಪ್ರಥಮ ದರ್ಜೆ ,13 ದ್ವಿತೀಯ ದರ್ಜೆ ಪಡೆದುಕೊಂಡಿದೆ. ಎಸ್.ಲಕ್ಷ್ಮಿ 592(ಶೇ.94.72) ಅಂಕಗಳನ್ನು ಪಡೆದು ತಾಲೂಕಿಗೆ ತೃತಿಯ ಸ್ಥಾನ ಗಳಿಸಿದ್ದು, ಎಚ್.ಆರ್.ಸ್ವಾತಿ 557(ಶೇ.89.12), ಜಿ.ಎಸ್.ಸಚಿನ್ 555 (ಶೇ.88.80), ಕೆ.ಸಹನಾ, 551(ಶೇ.88.16),ಆರ್.ತನುಜಾ 546(ಶೇ.87.36), ಎನ್.ವಿದ್ಯಾ 542 (86.72), ಆರ್.ಸೃಷ್ಟಿ 542(ಶೇ.86.72),ಡಿ.ವಿ.ಗಣೇಶ್ 537 (ಶೇ.85.92), ಎ.ಎನ್.ಗೀತಾಂಜಲಿ 535 (ಶೇ.85.60), ಎಸ್.ಮಂಜುಳಾ 534 (ಶೇ.85.44) ಉತ್ತಮ ಅಂಕ ಪಡೆದಿದ್ದಾರೆ.
ಪಿಯುಸಿಯಲ್ಲಿ ಪ್ರಥಮ: ತಾಲೂಕಿನ ಕ್ಯಾಲಸನಹಳ್ಳಿ ಶ್ರೀ ಸಿದ್ದರಾಮೇಶ್ವರ ವಿದ್ಯಾಸಂಸ್ಥೆಯ ಶೇಖರ ಕಲ್ಲಹಳ್ಳಿ  ವಿದ್ಯಾರ್ಥಿ ವಾಣಿಜ್ಯ ವಿಭಾಗದಲ್ಲಿ. ಶೇ.90.00 ತಾಲೂಕಿಗೆ ಪ್ರಥಾಮನಾಗಿದ್ದಾನೆ(542). ತಂದೆ ಶ್ರೀನಿವಾಸ ಸೊಪ್ಪು ತರಕಾರಿ ಮಾರಾಟಗಾರರಾಗಿದ್ದು ಕಷ್ಟಪಟು ಮಗನಿಗೆ ವಿದ್ಯಾಭ್ಯಾಸ ಕೊಡಿಸಿದ್ದಾರೆ. ಇದೆ ಸಂದರ್ಭದಲ್ಲಿ ಮಾತನಾಡಿದ ಶೇಖರ್ ನನ್ನ ಈ ಯಶಸ್ಸಿಗೆ ಕಾಲೇಜಿನ ಪ್ರಾಂಶುಪಾಲರು ಮತ್ತು ನನ್ನ ತಂದೆಯವರು ಮುಂದೆ ಸಿ.ಎ.ಮಾಡುವ ಅಭಿಲಾಶೆ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.
ಹೊಸಕೋಟೆ ಟೌನ್ ಕೆ.ಆರ್.ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರಿ ಕನ್ನಡ ಮಾದರಿ ಶಾಲೆಯ ಪದವೀಧರ ಮುಖ್ಯಶಿಕ್ಷಕರಾದ. ಕೆ.ರಮೇಶ್ ಅವರ ಪುತ್ರಿ ಕುಮಾರಿ ಎಚ್.ಆರ್.ಸಹನಾ ಅವರು ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ 95 ಅಂಕ ಗಳಿಸಿ ಸಾಧನೆ ಮಾಡಿರುತ್ತಾರೆ. ಒಟ್ಟು 600 ಅಂಕಗಳಿಗೆ 569 ಅಂಕಗಳಿಸಿರುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement