ಅಂಧ ಕಲಾವಿದರ ಸಂಗೀತ ಕಾರ್ಯಕ್ರಮ
ಸೊರಬ: ಆಧುನಿಕ ಗಾಳಿಯ ನಡುವೆ ದೇಸೀ ಸಂಸ್ಕೃತಿಗೆ ಬೆಲೆಯೇ ಇಲ್ಲದಂತಾಗಿದೆ ಎಂದು ಖೇದ ವ್ಯಕ್ತಪಡಿಸುತ್ತಿರುವ ನಡುವೆಯೇ ಅಂತಹ ಕಲಾವಿದರನ್ನು ಹುಡುಕಿ ತಂದು ವೇದಿಕೆ ನಿರ್ಮಿಸಿಕೊಟ್ಟ ಗರಿಮೆ ತಾಲೂಕಿನ ಚಿಮ್ಮನೂರು ಗ್ರಾಮದವರಿಗೆ ಸಂದಿದೆ. ಇಲ್ಲಿನ ತೀರ್ಥರಾಮೇಶ್ವರ ದೇವಸ್ಥಾನದ ವಾರ್ಷಿಕೋತ್ಸವ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಸಾಂಸ್ಕೃತಿಕ ಸಮಾರಂಭ ಏರ್ಪಡಿಸಿದ್ದು, ಇತ್ತೀಚೆಗೆ ಸಿರ್ಸಿ ಅಂಧ ಕಲಾವಿದರ ತಂಡ ಇಲ್ಲಿ ನಡೆಸಿಕೊಟ್ಟ ಸುಶ್ರಾವ್ಯ ಗಾಯನ ಸುಧೆ ಕಾರ್ಯಕ್ರಮ ಗಮನ ಸೆಳೆಯಿತು.
ಇಂದು ಉಚಿತ ಸಾಮೂಹಿಕ ವಿವಾಹ
ಸೂಲಿಬೆಲೆ: ಹೊಸಕೋಟೆ ಬಳಿಯಿರುವ ಸರ್ಕಾರಿ ಗುಟ್ಟಹಳ್ಳಿಯಲ್ಲಿ ಮೇ 12ಕ್ಕೆ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಗೊರವಿಗೆರೆ ಗ್ರಾಮದ ಗ್ರಾಪಂ ಮಾಜಿ ಸದಸ್ಯ ಲಕ್ಷಯ್ಯ ಮತ್ತು ಕುಟುಂಬದವರು ಹಮ್ಮಿಕೊಂಡಿರುವ 20 ಜೋಡಿಗಳ ಉಚಿತ ಸಾಮೂಹಿಕ ವಿವಾಹಗಳ ಕಾರ್ಯಕ್ರಮಕ್ಕೆ ವಧು, ವರರನ್ನು ಆರ್ಶಿವದಿಸಲು ಮುಳಬಾಗಲು ಕ್ಷೇತ್ರದ ನೂತನ ಶಾಸಕ ಕೊತ್ತನೂರು ಮಂಜುನಾಥ್ ಆಗಮಿಸಲಿದ್ದಾರೆ ಎಂದು ಯುವ ಮುಖಂಡ ಜಿ.ಎಲ್. ಮುರಳಿ ಪತ್ರಿಕಾ ಪ್ರಕಟಣಿಯಲ್ಲಿ ತಿಳಿಸಿದ್ದಾರೆ.