ಒಂದೆರಡು ದಿನದಲ್ಲಿ ಚಿತ್ರಾವತಿ ಬ್ಯಾರೇಜ್ನಿಂದ ನೀರು: ಡಿಸಿ
ಬಾಗೇಪಲ್ಲಿ: ಇಲ್ಲಿನ ಚಿತ್ರಾವತಿ ಬ್ಯಾರೇಜ್ನಿಂದ ಪಟ್ಟಣದ ನಾಗರಿಕರಿಗೆ ಒಂದೆರಡು ದಿನಗಳಲ್ಲಿ ಸಮರ್ಪಕ ಕುಡಿವ ನೀರು ಸರಬರಾಜು ಮಾಡುವುದಾಗಿ ಪುರಸಭೆ ಮುಖ್ಯಾಧಿಕಾರಿ ಆರ್.ಶ್ರೀಕಾಂತ್ ಭರವಸೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಟ್ಟಣದ ಜನತೆಗೆ ಕುಡಿವ ನೀರು ಸಮರ್ಪಕವಾಗಿ ಪೂರೈಸುವ ನಿಟ್ಟಿನಲ್ಲಿ ಬರ ಪರಿಹಾರದ ಯೋಜನೆಯಡಿ ಚಿತ್ರಾವತಿ ಜಲಾಶಯದಲ್ಲಿ 6 ಕೊಳವೆಬಾವಿ ಕೊರೆಸಲಾಗಿತ್ತು. ಈ ಕೊಳವೆಬಾವಿಗಳಿಂದ ಬರುವಂತಹ ನೀರು ಶೇಖರಣೆ ಮಾಡುವ ನಿಟ್ಟಿನಲ್ಲಿ ಬೃಹತ್ ನೀರಿನ ಸಂಪು ನಿರ್ಮಾಣ ಮಾಡಲಾಗಿದೆ.
ಶೇಖರಣೆಗೊಂಡ ನೀರು ಚಿತ್ರಾವತಿ ಡ್ಯಾಂ ನೀರು ಸರಬರಾಜು ಕೇಂದ್ರದಿಂದ ಪಟ್ಟಣದ ನೀರು ಶುದ್ಧೀಕರಣ ಘಟಕದ ಮೂಲಕ ಶುದ್ಧ ಕುಡಿವ ನೀರು ನಾಗರೀಕರಿಗೆ ವಾರಕ್ಕೊಮ್ಮೆ ಸರಬರಾಜು ಮಾಡಲಾಗುವುದು ಎಂದರು. 2-3 ವರ್ಷಗಳಿಂದ ಸತತ ಮಳೆ ಕೊರತೆಯಿಂದ ಚಿತ್ರಾವತಿ ಜಲಾಶಯದಲ್ಲಿ ನೀರಿಲ್ಲ. ಈ ಹಿನ್ನೆಲೆ 30 ಸಾವಿರಕ್ಕೂ ಅಧಿಕ ಜನಸಂಖ್ಯೆಯುಳ್ಳಂತಹ ಪಟ್ಟಣದ ಜನತೆಗೆ ಕುಡಿಯುವ ನೀರು ಸರಬರಾಜು ವ್ಯವಸ್ಥಿತವಾಗಿ ಪೂರೈಕೆ ಮಾಡಲು ತುಂಬಾ ತೊಂದರೆಯಾಗಿತ್ತು.ಈಗ ಚಿತ್ರಾವತಿ ಬ್ಯಾರೇಜಜ್ಮತ್ತು ಪಟ್ಟಣದಲ್ಲಿರುವ ಕೊಳವೆ ಬಾವಿಗಳಲ್ಲಿ ಸಿಗುವಂತಹ ನೀರು ಸೇರಿ ಸುಮಾರು 10 ಲಕ್ಷ ಲೀಟರರ್ನೀರನ್ನು ಮಾತ್ರ ಸದ್ಯಕ್ಕೆ ಪೂರೈಸಬಹುದಾಗಿದೆ ಎಂದರು.