ಧಾರಾಕಾರವಾಗಿ ಸುರಿದ ಗಾಳಿ ಮಳೆಗೆ ಬೆಳೆ ನಾಶ
ಕ.ಪ್ರ. ವಾರ್ತೆ ಆನೇಕಲ್ಲು ಮೇ 11
ತಾಲೂಕಿನ ಲಿಂಗಾಪುರದಲ್ಲಿ ಶುಕ್ರವಾರ ರಾತ್ರಿ ಸುರಿದ ಆಲಿಕಲ್ಲು ಮಳೆ ಹಾಗೂ ಬಿರುಗಾಳಿಗೆ ಬೆಳೆಹಾನಿ ಸಂಭವಿಸಿದೆ.
ಹರೀಶ್, ಆನಂದ, ಆನಂತ ಹಾಗೂ ಚಿನ್ನಮ್ಮ ಎಂಬವರ 7ಎಕರೆ ವಿಸ್ತೀರ್ಣದ ಗ್ರೀನ್ಹೌಸ್ನ ಛಾವಣಿ ಕುಸಿದು ಜೆರ್ಬೆರಾ ಹೂವಿನ ಬೆಳೆ ನಾಶವಾಗಿದೆ. ಆಲಿಕಲ್ಲು ಮಳೆಗೆ ಗ್ರೀನ್ಹೌಸ್ ಬಟ್ಟೆ ಹರಿದಿದೆ. ಬಿರುಗಾಳಿಗೆ ಛಾವಣಿ ಕುಸಿದು ಹೂ ಬೆಳೆಯ ಮೇಲೆ ಬಿದ್ದಿದೆ. ಹಸೀಲ್ದಾರ್ ಮತ್ತು ಕೃಷಿ ಅಧಿಕಾರಿ ಸ್ಥಳ ಪರಿಶೀಲನೆ ಮಾಡಿ ನಷ್ಟದ ಅಂದಾಜು ಮಾಡಿ ಕೃಷಿ ಇಲಾಖೆ ಸಹಕಾರದಿಂದ ಸರ್ಕಾರ ಹಾಗೂ ವಿವಿಧ ಇಲಾಖೆಗೆ ವರದಿ ಸಲ್ಲಿಸಲಾಗುವುದು ಎಂದಿದ್ದಾರೆ. ಲಿಂಗಾಪುರ ಮತ್ತು ಆಸುಪಾಸಿನ ಹಳ್ಳಿಗಳಲ್ಲಿ ಕೈ ಬೆಳೆಗಳು ಹಾಳಾಗಿದ್ದು, ಚಪ್ಪರದ ಬೆಳೆಗಳು ನೆಲಕಚ್ಚಿದೆ. ಟ್ರಾನ್ಸ್ಫಾರ್ಮರ್ಕುಸಿದು ಬಿದ್ದಿದೆ. ಯಾವುದೇ ಜೀವಹಾನಿ ಆಗಿಲ್ಲ ಎಂದು ತಹಸೀಲ್ದಾರ್ ಶಿವೇಗೌಡ ತಿಳಿಸಿದ್ದಾರೆ.