ನೂತನ ಶಾಸಕರಿಗೆ ಅಭಿನಂದನೆ
ಸೂಲಿಬೆಲೆ: ಹೊಸಕೋಟೆ ವಿಧಾನಸಭಾ ಕ್ಷೇತ್ರಕ್ಕೆ ನೂತನ ಶಾಸಕರಾಗಿ ಆಯ್ಕೆಯಾದ ಎಂಟಿಬಿ ನಾಗರಾಜ್ ಅವರಿಗೆ ಸೂಲಿಬೆಲೆ ಪಟ್ಟಣದ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ. ಸಜ್ಜನ ರಾಜಕಾರಣಿ ಎಂದು ಹೆಸರು ಪಡೆದಿರುವ ಎಂಟಿಬಿ ನಾಗರಾಜ್ ಅವರಿಂದ ಕ್ಷೇತ್ರಕ್ಕೆ ಉತ್ತಮ ಆಡಳಿತ ಸಿಗಲೆಂದು ಆಶಿಸಿರುವ ಪೇಪರ್ ಶಿವರುದ್ರಪ್ಪ, ಸಹಕಾರ ಬ್ಯಾಂಕ್ ನಿರ್ದೇಶಕರಾದ ಅಂಕೋನಹಳ್ಳಿ ಸೋಮಶೇಖರ್, ಗಿಡ್ಡಪ್ಪನಹಳ್ಳಿ ಗಂಗಪ್ಪ, ಜಿಟಿ ಲೋಕೇಶ್, ಗ್ರಾಪಂ ಸದಸ್ಯ ಶಿವಣ್ಣ, ಎಸ್‌ಎಂಆರ್, ರುದ್ರ ಮೂರ್ತಿ, ಜುಂಜಪ್ಪ, ಲಿಂಗಪ್ಪ, ನಾಗರಾಜ್ ಸೇರಿದಂತೆ ಇತರರು ನೂತನ ಶಾಸಕರನ್ನು ಅಭಿನಂದಿಸಿದ್ದಾರೆ.
ನಾಗರಾಜ್ ಕೃತಜ್ಞತೆ
ಸೂಲಿಬೆಲೆ: ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಮತ ನೀಡಿ ಗೆಲವು ತರಲು ಕಾರಣರಾದ ಸಮಸ್ತ ಮತದಾರರಿಗೆ ಶಾಸಕ ಎಂಟಿಬಿ ನಾಗರಾಜ್ ಕೃತಜ್ಞತೆ ಸಲ್ಲಿಸಿದ್ದಾರೆ. ಸೂಲಿಬೆಲೆಯಲ್ಲಿ ಶಾಸಕರ ಪರವಾಗಿ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ಮುಖಂಡರಾದ ಮುನಿರಾಜ್, ಹೊಸಕೋಟೆ ಕ್ಷೇತ್ರದಲ್ಲಿ ಬದಲಾವಣಿ ಬಯಿಸಿ ಮತದಾರರು ಎಂಟಿಬಿ ನಾಗರಾಜ್ ಅವರನ್ನು ಗೆಲ್ಲಿಸುವಲ್ಲಿ ಹೊಸಕೋಟೆ ಟೌನ್, ನಂದಗುಡಿ ಹಾಗೂ ಅನುಗೊಂಡಹಳ್ಳಿ ಹೋಬಳಿ ಮತದಾರರ ಪಾತ್ರ ಬಹುಮುಖ್ಯವಾಗಿದೆ ಎಂದರು. ಎಸ್ಟಿ ಘಟಕ ಅಧ್ಯಕ್ಷ ವೆಂಕಟೇಶ್, ಗ್ರಾಪಂ ಸದಸ್ಯ ಎಸ್.ಕೆ ರಾಘವೇಂದ್ರ, ರವಿ ಹಾಜರಿದ್ದರು.
ಮಹಿಳೆ ಆತ್ಮಹತ್ಯೆ
ಮಾಗಡಿ: ಗೃಹಿಣಿಯೊಬ್ಬಳು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪುರ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ಕಲ್ಲೆಂಟೆಪಾಳ್ಯದ ಗಂಗಾಧರ್ ಅವರ ಪತ್ನಿ ಚೈತ್ರ(24) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಕಳೆದ ಆರು ವರ್ಷಗಳ ಹಿಂದೆಯಷ್ಟೆ ಗಂಗಾಧರ್ ಎಂಬವರನ್ನು ಚೈತ್ರಳ ಜತೆ ವಿವಾಹ ಮಾಡಿಕೊಡಲಾಗಿತ್ತು. ಈಕೆಗೆ ನಾಲ್ಕು ವರ್ಷದ ಗಂಡು ಮಗುವಿದೆ. ಈಕೆ ವ್ಯಕ್ತಿಯೊಬ್ಬನ ಜತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದಳು ಎನ್ನಲಾಗಿದೆ. ಕಳೆದ 20 ದಿನಗಳ ಹಿಂದೆ ಆ ವ್ಯಕ್ತಿಯ ಜತೆ ಚೈತ್ರ ಪರಾರಿಯಾಗಿದ್ದಳು. ಪತ್ನಿ ಕಾಣೆಯಾಗಿರುವ ಬಗ್ಗೆ ಪೊಲೀಸ್ ಠಾಣಿಯಲ್ಲಿ ಗಂಗಾಧರ್ ದೂರು ದಾಖಲಿಸಿದ್ದನು. ಪೊಲೀಸರು ಚೈತ್ರಳನ್ನು ಪತ್ತೆ ಹಚ್ಚಿ ಪೊಲೀಸ್ ಠಾಣೆಯಲ್ಲಿ ಬುದ್ಧಿವಾದ ಹೇಳಿ ಮನೆಗೆ ಕಳಿಸಿದ್ದರು. ಆದರೆ, ಶುಕ್ರವಾರ ಚೈತ್ರ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.