ಪತ್ರಕರ್ತ ಸಯ್ಯದ್ ಗೌಸ್ ನಿಧನ
ಮಡಿಕೇರಿ: ಕೊಡಗಿನ ವಿವಿಧ ಪತ್ರಿಕೆಗಳಲ್ಲಿ ದಶಕಕ್ಕೂ ಹೆಚ್ಚಿನ ಅವಧಿ ಕಾರ್ಯನಿರ್ವಹಿಸಿದ್ದ ಹಿರಿಯ ಪತ್ರಕರ್ತ ಸಯ್ಯದ್ ಗೌಸ್ (54) ಮೈಸೂರಿನಲ್ಲಿ ನಿಧನರಾಗಿದ್ದಾರೆ. ಮೃತರು ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದು, ಅಂತ್ಯಕ್ರಿಯೆ ಶುಕ್ರವಾರ ಮೈಸೂರಿನಲ್ಲಿ ನಡೆಯಿತು. ಸಯ್ಯದ್ ಗೌಸ್ ಅವರು ಜಿಲ್ಲೆಯ ನವ ಶಕ್ತಿ, ಗಡಿನಾಡ ಸಂಚಾರಿ, ಕಾಫಿ ಲ್ಯಾಂಡ್ ನ್ಯೂಸ್, ಜನವಾಹಿನಿ ವಿವಿಧ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು.