ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಪ್ರಪಾತಕ್ಕೆ ವ್ಯಾನ್: ತಾಯಿ, ಮಗು ಸಾವು

Rashmi Kasaragodu
Updated On : 12 May 2013, 12:52 pm

ಸಕಲೇಶಪುರ: ಕುಟುಂಬ ಪರಿವಾರ ಸಹಿತ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಮಾರುತಿ ವ್ಯಾನ್ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 48ರ ರಾಜ್‌ಘಾಟ್ ಸಮೀಪ ಪ್ರಪಾತಕ್ಕೆ ಬಿದ್ದು ತಾಯಿ, ಮಗು ಸ್ಥಳದಲ್ಲೆ ಮೃತಪಟ್ಟಿರುವ ಘಟನೆ ಶನಿವಾರ ಮುಂಜಾನೆ ನಡೆದಿದೆ. ؔ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ನಿಡಗುತ್ತಿ ಗ್ರಾಮದ ಶೃತಿ (22) ಮತ್ತು ಮನುಶ್ರೀ (1) ಮೃತಪಟ್ಟ ದುರ್ದೈವಿಗಳು.
ನಸುಕಿನ 5.30 ಸಮಯದಲ್ಲಿ ರಾಜ್‌ಘಾಟ್ ಸಮೀಪ ಚಾಲಕನ ನಿಯಂತ್ರಣ ತಪ್ಪಿದ ಮಾರುತಿ ವ್ಯಾನ್ ಪ್ರಪಾತಕ್ಕೆ ಬಿದ್ದಿದ್ದು, ವಾಹನ ಚಾಲನೆ ಮಾಡುತ್ತಿದ್ದ ಶೃತಿಯ ಪತಿ ಸೊನ್ನೇಗೌಡ ಗಾಯಗೊಂಡಿದ್ದಾರೆ.
ವ್ಯಾನ್‌ನಲ್ಲಿದ್ದ ಇತರೆ ಇಬ್ಬರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಕೇಂದ್ರಕ್ಕೆ ಸಾಗಿಸಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement