ಮಳೆಗೆ ಕುಸಿದು ಬಿದ್ದ ತಡೆಗೋಡೆ
ದೇವನಹಳ್ಳಿ: ದೇವನಹಳ್ಳಿಯಿಂದ ಅಕ್ಕೂಪೇಟೆಗೆ ರಸ್ತೆಯಲ್ಲಿ ರೈಲು ಹಳಿಗೆ (ಅಂಡರ್ಪಾಸ್) ಹಾಕಲಾಗಿದ್ದ ತಡೆಗೋಡೆಯು ಶುಕ್ರವಾರ ರಾತ್ರಿ ಸುರಿದ ಮಳೆಗೆ ಕುಸಿದಿದೆ. ಅಂಡರ್ಪಾಸ್ ಕಾಮಗಾರಿ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದು, ಇನ್ನೂ ಪೂರ್ಣಗೊಂಡಿರಲಿಲ್ಲ ಎನ್ನಲಾಗಿದ್ದು, ರೈಲು ಹಳಿ ಅಂಡರ್ಪಾಸ್ನ ನಾಲ್ಕುಕಡೆ ಸಿಮೆಂಟ್ ತಡೆಗೋಡೆ ನಿರ್ಮಿಸಿ ಮಣ್ಣನ್ನು ತುಂಬಲಾಗಿದೆ. ಆದರೆ, ಸುರಿದ ಮಳೆ ನೀರು ಸರಾಗವಾಗಿ ಹರಿದುಹೋಗದೆ ತಡೆಗೋಡೆ ಒಳಗೆ ನುಗ್ಗಿ ಮಣ್ಣಿನ ಭಾರದಿಂದಾಗಿ ತಡೆಗೋಡೆ ಕುಸಿದಿದೆ ಎನ್ನಲಾಗಿದೆ. ತಡೆಗೋಡೆ ನಿರ್ಮಿಸಬೇಕಾದರೆ ಅಗತ್ಯವಾದ ಕಬ್ಬಿಣ ಬಳಸದೇ ಇರುವುದೇ ಇರುವುದು ಮತ್ತು ಮಳೆ ನೀರು ಸರಾಗವಾಗಿ ಹರಿಯದಂತೆ ಮಾಡಿರುವುದೇ ಗೋಡೆ ಕುಸಿಯಲು ಕಾರಣ ಎನ್ನಲಾಗಿದೆ.