ರಿಲಯನ್ಸ್ಗೋದಾಮಿಗೆ ಹಾನಿ
ಹೊಸಕೋಟೆ: ತಾಲೂಕಿನ ನಿಡಘಟ್ಟದಲ್ಲಿರುವ ರಿಲಯನ್ಸ್ ಅಪಾರೆಲ್ನ ಗೋದಾಮಿಗೆ ಗುರುವಾರ ರಾತ್ರಿ ಬೀಸಿದ ಬಿರುಗಾಳಿ, ಮಳೆಯಿಂದಾಗಿ ತೀವ್ರ ಹಾನಿಯುಂಟಾಗಿದೆ. ಗೋದಾಮಿನ ಛಾವಣಿಗೆ ಹಾಕಿದ್ದ ಶೀಟ್ಗಳು ಸುಮಾರು 100 ಮೀಟರ್ನಷ್ಟು ಹಾರಿಹೋಗಿವೆ. ವಿದ್ಯುತ್ ತಂತಿಗಳು ಕೆಳಗೆ ಬಿದ್ದ ರಭಸಕ್ಕೆ ಸುಮಾರು 40ಕ್ಕೂ ಹೆಚ್ಚು ಕಂಬಗಳು ನೆಲಕ್ಕುರುಳಿವೆ. ಗೋದಾಮಅನ್ನು ಎನ್ಡಿಆರ್ ಸಂಸ್ಥೆಯಿಂದ ಬಾಡಿಗೆಗೆ ಪಡೆದಿದ್ದು, ದಾಸ್ತಾನು ಮಾಡಿದ್ದ ಸುಮಾರು 40 ಲಕ್ಷ ಸಿದ್ಧ ಉಡುಪುಗಳು ಹಾಳಾಗಿದ್ದು, ಸುಮಾರು 50 ಲಕ್ಷ ನಷ್ಟ ಸಂಭವಿಸಿದೆ. ರಿಲಯನ್ಸ್ ಸಂಸ್ಥೆಯ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಎಸ್ಸೆಸ್ಸೆಲ್ಸಿ: ತಾಲೂಕಿಗೆ ಪ್ರಥಮ
ಸರ್ಜಾಪುರ: ಎಸ್ಸೆಸ್ಸೆಲ್ಸಿಯಲ್ಲಿ ಪರೀಕ್ಷೆಯಲ್ಲಿ ತಾಲೂಕಿನ ಸರ್ಜಾಪುರದ ಸೇಂಟ್ ಫಿಲೋಮೆನ್ ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿ ಜೆ. ರಾಹುಲ್ 613 ಅಂಕ ಪಡೆದು ಶೇ. 98.08 ಫಲಿತಾಂಶ ಗಳಿಸಿ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದಾನೆ. ಅದೇ ರೀತಿ ಎನ್. ಸುಜಯ್ಕುಮಾರ್ 596 ಅಂಕ ಗಳಿಸಿ ಶೇ. 95.31 ರಷ್ಟು ಫಲಿತಾಂಶ ಪಡೆದುಕೊಂಡಿದ್ದಾನೆ. ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಮುಖ್ಯ ಶಿಕ್ಷಕ, ಶಿಕ್ಷಕರು ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.