ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಹಣದ ಪ್ರಭಾವದಿಂದ ಸೋಲು: ಕೃಷ್ಣಮೂರ್ತಿ

Rashmi Kasaragodu
Updated On : 12 May 2013, 12:49 pm

ಕ.ಪ್ರ.ವಾರ್ತೆ  ಮಾಗಡಿ  ಮೇ11
ಮತದಾರರು ಹಣಕ್ಕಾಗಿ ತಮ್ಮ ಹಕ್ಕನ್ನು ಮಾರಿಕೊಂಡಿದರ ಫಲದಿಂದ ಸೋಲು ಅನುಭವಿಸಬೇಕಾಯಿತು ಎಂದು ಕೆಜೆಪಿ ಪರಾಜಿತ ಅಭ್ಯರ್ಥಿ  ಎಚ್.ಎಂ. ಕೃಷ್ಣಮೂರ್ತಿ ವಿಷಾದ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 15 ವರ್ಷಗಳಿಂದ ಕ್ಷೇತ್ರದಲ್ಲಿ ಕೆಂಪೇಗೌಡ ಹೆಸರಿನಲ್ಲಿ ಕೆಂಪೇಗೌಡರ ಜಯಂತ್ಯುತ್ಸವ, ಅನ್ನದಾಸೋಹ, ಆರೋಗ್ಯ ತಪಾಸಣಾ ಶಿಬಿರ, ಫಲಾನುಭವುಗಳಿಗೆ ಶಸ್ತ್ರಚಿಕಿತ್ಸೆ, ಕನ್ನಡಕ ವಿತರಣೆ, ಸರಳ ಸಾಮೂಹಿಕ ವಿವಾಹ, ನಿರುದ್ಯೋಗಿಗಳಿಗೆ ಉದ್ಯೋಗ ಮಾರ್ಗದರ್ಶನ, ಮಹಿಳೆಯರಿಗೆ ಹೊಲಿಗೆ ಯಂತ್ರ ತರಬೇತಿ, ಕಂಪ್ಯೂಟರ್ ತರಬೇತಿ ಹೀಗೆ ಹತ್ತಾರು ಸಾಮಾಜಿಕ ಸೇವೆಯನ್ನು ನನ್ನ ಸ್ವಂತ ದುಡಿಮೆಯಿಂದ ಮಾಡಿಕೊಂಡು ಬಂದಿದ್ದು, ಕ್ಷೇತ್ರದ ಜನತೆಯ ಒತ್ತಾಯದ ಮೇರೆಗೆ ರಾಜಕೀಯ ಪ್ರವೇಶ ಮಾಡಿದೆ. ಪ್ರಸ್ತುತ ವಿಧಾನ ಸಭಾ ಚುನಾವಣೆ ಸ್ಪರ್ಧಿಸಿ ಗೆಲ್ಲಲು ಜಮೀನು ಮಾರಾಟ ಮಾಡಿ ಕೋಟ್ಯಂತರ ರು. ಖರ್ಚು ಮಾಡಿದರೂ ಮತದಾರರು ಕೇವಲ 27,143 ಮತ ನೀಡುವ ಮೂಲಕ ಧರ್ಮವನ್ನು ಕಡೆಗಣಿಸುವ ಮೂಲಕ ನನ್ನ ಭಾವನೆಗೆ ತಣ್ಣೀರೆರಚಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಶತ್ರು ಅಲ್ಲ: ಜೆಡಿಎಸ್‌ನಿಂದ ಗೆದ್ದಿರುವ ಶಾಸಕ ಎಚ್.ಸಿ. ಬಾಲಕೃಷ್ಣ ನನ್ನ ಶತ್ರು ಅಲ್ಲ. ಬಾಲಕೃಷ್ಣ ಮೂರು ಬಾರಿ ಗೆಲ್ಲಲು ನಾನೇ ಕಾರಣ. ಪುರಸಭೆ ಚುನಾವಣೆಯಲ್ಲಿ ನನ್ನನ್ನು ಬಳಸಿಕೊಂಡ ಕಾಂಗ್ರೆಸ್ ನಾಯಕರು ವಿಧಾನಸಭಾ ಚುನಾವಣೆಗೆ ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷದಿಂದ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಮೋಸ ಮಾಡಿದರು ಎಂದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement