20ರಿಂದ ಮಕ್ಕಳಿಗೆ ಬೇಸಿಗೆ ಶಿಬಿರ
ಮಾಗಡಿ: ಜವಹರ್ಲಾಲಭವನ ಸೊಸೈಟಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಮೇ 20 ರಿಂದ 29 ರವರೆಗೆ ಇಲ್ಲಿನ ರಂಗನಾಥಸ್ವಾಮಿ ಪ್ರೌಢಶಾಲೆಯಲ್ಲಿ 6 ರಿಂದ 16 ನೇ ವಯಸ್ಸಿನ ಮಕ್ಕಳಿಗೆ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಸಿಡಿಪಿಓ ಇಲಾಖೆಯ ಯೋಜನಾಧಿಕಾರಿ ಕೆಂಪಣ್ಣ ತಿಳಿಸಿದ್ದಾರೆ. ಶಿಬಿರದಲ್ಲಿ ಚಿತ್ರಕಲೆ, ಕರಕುಶಲತೆ, ಜೋಡಿ ಮಣ್ಣಿನ ಕಲೆ, ಸಮೂಹ ಗೀತೆ, ಸಮೂಹ ನೃತ್ಯ, ಕರಾಟೆ, ಯೋಗ, ಬೊಂಬೆ ತಯಾರಿಕೆ, ಮೆಹಂದಿ, ರಂಗ ತರಬೇತಿ ಕಸದಿಂದ ರಸ, ರಂಗೋಲಿ, ಎಂಬ್ರಾಯಿಡರಿ ಮತ್ತು ಹೂ ತಯಾರಿಕೆ ಚಟುವಟಿಕೆಗಳನ್ನು ಶಿಬಿರದಲ್ಲಿ ತರೇಬೇತಿ ನೀಡಲಾಗುವುದು. ಆಸಕ್ತ ಮಕ್ಕಳು ಮೇ.18 ರೊಳಗೆ ಸಿಡಿಪಿಓ ಇಲಾಖೆಯ ಕೆಲಸ ವೇಳೆ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಕೋರಲಾಗಿದೆ. ದೂ. 080-27745431 ಸಂಪರ್ಕಿಸಬಹುದು.
15 ರಂದು ಶಂಕರ ಜಯಂತ್ಯುತ್ಸವ
ಮಾಗಡಿ: ಶಂಕರ ಸೇವಾ ಸಮಿತಿ ವತಿಯಿಂದ ಮೇ 15 ರಂದು ಪಟ್ಟಣದ ಶ್ರೀರಾಮಮಂದಿರದಲ್ಲಿ ಶಂಕರ ಜಯಂತೋತ್ಸವ ಏರ್ಪಡಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಟಿ.ಕೆ. ಹಿರಿಯಣ್ಣ ತಿಳಿಸಿದ್ದಾರೆ. ಶಂಕರ ಜಯಂತಿ ಅಂಗವಾಗಿ ಮಹಾಚಂಡಿಕಾ ಹೋಮ, ರುದ್ರಾಭಿಷೇಕ ಹೋಮ, ಪೂರ್ಣಾಹುತಿ ನೆರವೇರಲಿದೆ. ನಂತರ ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಡೆಯಲಿದೆ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಹಾಗು ಪದವಿಯಲ್ಲಿ ಅತಿ ಹೆಚ್ಚು ಅಂಕಗಳಿಸಿರುವ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಸಮಿತಿ ಮಹಾ ಪೋಷಕ ಎಚ್.ಎಸ್.ಸುರೇಂದ್ರ ಅವರಿಂದ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದು ಸಮಿತಿ ಕಾರ್ಯದರ್ಶಿ ಕೆ.ಎಸ್.ಬಾಲಕೃಷ್ಣ ತಿಳಿಸಿದರು.
ಸಮಿತಿ ಪದಾಧಿಕಾರಿಗಳು: ಶಂಕರ ಸೇವಾ ಸಮಿತಿ ಅಧ್ಯಕ್ಷ ಟಿ.ಕೆ.ಹಿರಿಯಣ್ಣ, ಕಾರ್ಯದರ್ಶಿ ಕೆ.ಎಸ್.ಬಾಲೃಷ್ಣ, ಪ್ರಧಾನ ಪೋಷಕರು ಜಗನ್ನಾಥ್, ಪಾನ್ಯಂ. ನಟರಾಜು, ಸುಬ್ರಮಣ್ಯಸ್ವಾಮಿ,ಸುರೇಂದ್ರ, ಸುರೇಶ್, ಅಯ್ಯರ್,ಚಂದ್ರಶೇಖರ್ ವಿದ್ಯಾಭಾರತಿ ಟ್ರಸ್ಟ್, ಕೆ.ಶೇಷಪ್ಪ, ಎಂ.ಎಸ್. ಅರುಣಾಚಲಂ,ಸಂಚಾಲಕರಾದಯೋಗಾನಂದ್, ಎಸ್.ಎಲ್.ಎನ್.ಪ್ರಸಾದ್ ಇದ್ದಾರೆ.
ಪೊಲೀಸ್ ಪತ್ನಿ ಸರ ಅಪಹರಣ
ಬೆಂಗಳೂರು: ಮನೆಗೆ ನುಗ್ಗಿದ ದುಷ್ಕರ್ಮಿ ಪೊಲೀಸ್ ಪೇದೆಯ ಪತ್ನಿ ಕಣ್ಣಿಗೆ ಖಾರದಪುಡಿ ಎರಚಿ ಚಿನ್ನದ ಸರ ದೋಚಿರುವ ಘಟನೆ ಕಾಟನ್ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆದಿದೆ. ಕಾಟನ್ಪೇಟೆಯ ಬ್ರಿಯಾಂಡ್ ವೃತ್ತದ ನಿವಾಸಿ ಶೋಭಾ ಸರ ಕಳೆದುಕೊಂಡವರು. ಶೋಭಾ ಹಾಗೂ ಪತಿ ಗೋವರ್ಧನ್ ಸ್ವಾಮಿ ಅವರು ಮೈಸೂರು ರಸ್ತೆಯ ಪೊಲೀಸ್ ವಸತಿಗೃಹದಲ್ಲಿ ವಾಸಿಸುತ್ತಿದ್ದು, ಶನಿವಾರ ರಾತ್ರಿ ಶೋಭಾ ಒಬ್ಬರೇ ಮನೆಯಲ್ಲಿದ್ದರು.