ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಇಂದಿನಿಂದ ಉಚಿತ ಯೋಗ ಶಿಬಿರ

Rashmi Kasaragodu
Updated On : 13 May 2013, 12:57 pm

ದೊಡ್ಡಬಳ್ಳಾಪುರ: ಭಾರತ್ ಸ್ವಾಭಿಮಾನ್ ಟ್ರಸ್ಟ್ ಮತ್ತು ಪುಷ್ಪಾಂಡಜಮುನಿ ಮಹರ್ಷಿ ಆಶ್ರಮದ ನೇತೃತ್ವದಲ್ಲಿ ಮೇ 13ರ ಸೋಮವಾರದಿಂದ ಮೇ 19ರ ಭಾನುವಾರದವರೆಗೆ 7 ದಿನಗಳ ಉಚಿತ ಯೋಗ ವಿಜ್ಞಾನ ಮತ್ತು ಪ್ರಾಣಾಯಾಮ ಶಿಬಿರ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಒಳಾಂಗಣದಲ್ಲಿ ನಡೆಯಲಿದೆ. 10 ವರ್ಷ ಮೇಲ್ಪಟ್ಟವರು ಶಿಬಿರದಲ್ಲಿ ಭಾಗವಹಿಸಬಹುದಾಗಿದ್ದು, ಪ್ರವೇಶ ಉಚಿತವಾಗಿದೆ. ಬೆಳಗ್ಗೆ 5.15ರಿಂದ 7 ಗಂಟೆವರೆಗೆ ನಡೆಯುವ ಶಿಬಿರದಲ್ಲಿ ಶ್ರೀದಿವ್ಯಜ್ಞಾನಾನಂದಸ್ವಾಮಿಜಿ ಯೋಗಶಿಕ್ಷಣ ನೀಡಲಿದ್ದಾರೆ. ಸಾರ್ವಜನಿಕರು ಶಿಬಿರದ ಸದುಪಯೋಗ ಪಡಿಸಿಕೊಳ್ಳಬಹುದು. ವಿವರಗಳಿಗೆ 9036241751 ಸಂಪರ್ಕಿಸಬಹುದು.


17ರಿಂದ ಬೇಸಿಗೆ ಉಚಿತ ಶಿಬಿರ
ಕನಕಪುರ: ಬೆಂಗಳೂರಿನ ಬಾಲಭವನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಕನಕಪುರ ಸಂಯುಕ್ತ ಆಶ್ರಯದಲ್ಲಿ ಹತ್ತು ದಿನಗಳ ಕಾಲ ಉಚಿತ ಬೇಸಿಗೆ ಶಿಬಿರ ಮೇ 17 ರಿಂದ ಮೇ 27 ರವರೆಗೆ ಇಲ್ಲಿನ ಎಕ್ಸ್‌ಮುನಿಸಿಪಲ್‌ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನಡೆಯಲಿದೆ. ಕನಕಪುರ ತಾಲೂಕು ವ್ಯಾಪ್ತಿಯ 9 ರಿಂದ 14 ವಯೋವುತಿಯ ಮಕ್ಕಳು ಶಿಬಿರದಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಬೇಸಿಗೆ ಶಿಬಿರದಲ್ಲಿ ಚಿತ್ರಕಲೆ, ಕರಕುಶಲಕಲೆ, ಟೆರ್ರಾಕೋಟಾ, ಸಮೂಹ ಗೀತಗಾಯನ, ಸಮೂಹನೃತ್ಯ, ಯೋಗ, ಕಲೆಗಳ ಬಗ್ಗೆ ಉಚಿತವಾಗಿ ತಜ್ಞರಿಂದ ತರಬೇತಿ ನೀಡಲಾಗುವುದು. ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಕನಕಪುರ ಸಿಡಿಪಿಓರವರನ್ನು ಸಂಪರ್ಕಿಸಲು ಕೋರಿದೆ. ಫೋನ್-080 275 22282 ಹಾಗೂ ಮೊಬೈಲ್- 94820 90254 ಸಂಪರ್ಕಿಸಲು ಕೋರಿದೆ.
ಶಂಕರ ವಿಜಯ ಕಾವ್ಯವಾಚನ
ಕನಕಪುರ: ಕರ್ನಾಟಕ ಗಮಕಕಲಾ ಪರಿಷತ್ತು, ಶೃಗೇರಿ ಶಂಕರಮಠ ಕನಕಪುರ ಸಂಯುಕ್ತ ಆಶ್ರಯದಲ್ಲಿ ಸಾಲಿಗ್ರಾಮದ ಕುಮಾರಮಾಧವ ಶ್ರೀಕಂಠಶಾಸ್ತ್ರಿಗಳು ರಚಿಸಿರುವ ಮಹಾಕಾವ್ಯ ಶಂಕರ ವಿಜಯ ಕಾವ್ಯವಾಚನ ಹಾಗೂ ವ್ಯಾಖ್ಯಾನ ಮೇ 13 ರಂದು ಕೋಟೆ ಶ್ರೀ ಶಂಕರಮಠ ಸಭಾಂಗಣದಲ್ಲಿ ನಡೆಯಲಿದೆ. ಗಮಕಿ ಪ್ರಮೀಳಾ ಮುರಳೀಧರ್,ಎಂ.ಆರ್.ರಾಮ ಮೂರ್ತಿ,ಬೆ.ಗೋ.ರಮೇಶ್‌ಗಮಕವಾಚನ ಮಾಡಲಿದ್ದು, ಕಾವ್ಯದ ವ್ಯಾಖ್ಯಾನವನ್ನು ವಿದ್ವಾಂಸರುಗಳಾದ ಕಮಲಾವಿಠಲರಾವ್, ಬೆ.ಗೋ.ರಮೇಶ್,ಎಂ.ಆರ್.ಕೇಶವಮೂರ್ತಿ ನಡೆಸಿಕೊಡಲಿದ್ದಾರೆ. ಮೇ 15 ರಂದು ಬುಧವಾರ ಸಮಾರೋಪ ಸಮಾರಂಭ ನಡೆಯಲಿದ್ದು ಎಂ.ಆರ್.ಸತ್ಯನಾರಾಯಣ ರವರ ಕಾವ್ಯವಾಚನ, ಎಂ.ಆರ್.ಕೇಶವಮೂರ್ತಿಯವರಿಂದ ವ್ಯಾಖ್ಯಾನ ನಡೆಯಲಿದೆ.
ಬುದ್ಧಿಮಾಂದ್ಯ ಯುವಕ ನಾಪತ್ತೆ
ಮಾಗಡಿ: ಕುದೂರು ಹೋಬಳಿ ಕಾಗಿಮಡು ಗ್ರಾಮದ ವಾಸಿ ಬುದ್ಧಿಮಾಂದ್ಯ ಕೆ.ಎಸ್.ಉಮೇಶ್ ಕಾಣೆಯಾಗಿದ್ದಾನೆ. ಮೇ 7 ರಂದು ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಮನೆಯಿಂದ ಹೊರಗಡೆ ಹೋದವನು ಮತ್ತೆ ಮನೆಗೆ ವಾಪಸ್ಸಾಗಿಲ್ಲ, ಈ ಸಂಬಂಧ ಕುದೂರು ಪೊಲೀಸ್ ಠಾಣೆಗೆ ದೂರು ನೀಡಿರುವುದಾಗಿ ಉಮೇಶ್ ಅಣ್ಣ ಕೆ.ಎಸ್. ಪ್ರಕಾಶ್ ತಿಳಿಸಿದ್ದಾರೆ. ಚಹರೆ ಕೋಲುಮುಖ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಬಣ್ಣ, ವಯಸ್ಸು 35, 5.6 ಅಡಿ,ಕೇಸರಿ ಬಣ್ಣದ ಶರ್ಟ್, ಕಪ್ಪು ಪ್ಯಾಂಟ್ ಧರಿಸಿದ್ದ. ಮಾತನಾಡಲು ಬರುವುದಿಲ್ಲ. ಕುದೂರು ಪೊಲೀಸ್ ಠಾಣೆ ದೂ. ಸಂಖ್ಯೆ 080-27762241, ರಾಮನಗರ ಎಸ್ಪಿ ಕಚೇರಿ  080-27271100 ಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement