ಶಂಕರ ವಿಜಯ ಕಾವ್ಯವಾಚನ ಇಂದು
ಕನಕಪುರ: ಕರ್ನಾಟಕ ಗಮಕಕಲಾ ಪರಿಷತ್ತು, ಶೃಗೇರಿ ಶಂಕರಮಠ ಕನಕಪುರ ಸಂಯುಕ್ತ ಆಶ್ರಯದಲ್ಲಿ ಸಾಲಿಗ್ರಾಮದ ಕುಮಾರಮಾಧವ ಶ್ರೀಕಂಠಶಾಸ್ತ್ರಿಗಳು ರಚಿಸಿರುವ ಮಹಾಕಾವ್ಯ ಶಂಕರ ವಿಜಯ ಕಾವ್ಯವಾಚನ ಹಾಗೂ ವ್ಯಾಖ್ಯಾನ ಕಾರ್ಯಕ್ರಮ ಮೇ 13 ರಂದು ಕೋಟೆ ಶ್ರೀ ಶಂಕರಮಠ ಸಭಾಂಗಣದಲ್ಲಿ ನಡೆಯಲಿದೆ. ಗಮಕಿ ಪ್ರಮೀಳಾ ಮುರಳೀಧರ್,ಎಂ.ಆರ್.ರಾಮ ಮೂರ್ತಿ,ಬೆ.ಗೋ.ರಮೇಶ್ಗಮಕವಾಚನ ಮಾಡಲಿದ್ದು, ಕಾವ್ಯದ ವ್ಯಾಖ್ಯಾನವನ್ನು ವಿದ್ವಾಂಸರುಗಳಾದ ಕಮಲಾವಿಠಲರಾವ್, ಬೆ.ಗೋ.ರಮೇಶ್,ಎಂ.ಆರ್.ಕೇಶವಮೂರ್ತಿ ನಡೆಸಿಕೊಡಲಿದ್ದಾರೆ. ಮೇ 15 ರಂದು ಬುಧವಾರ ಸಮಾರೋಪ ಸಮಾರಂಭ ನಡೆಯಲಿದ್ದು ಎಂ.ಆರ್.ಸತ್ಯನಾರಾಯಣ ರವರ ಕಾವ್ಯವಾಚನ, ಎಂ.ಆರ್.ಕೇಶವಮೂರ್ತಿಯವರಿಂದ ವ್ಯಾಖ್ಯಾನ ನಡೆಯಲಿದೆ. ಸಾಹಿತ್ಯಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಜಿಲ್ಲಾಧ್ಯಕ್ಷ ಎಲ್ಲೇಗೌಡ ಬೆಸಗರಹಳ್ಳಿ ಕೋರಿದ್ದಾರೆ.