ಶ್ವಾನಗಳಿಗೆ ವಿಷವಿಕ್ಕಿದ್ದಕ್ಕೆ ಬೇಸತ್ತು ಗರ್ಭಿಣಿ ಆತ್ಮಹತ್ಯೆ
ಚಿಕ್ಕಬಳ್ಳಾಪುರ: ಮನೆಯಲ್ಲಿ ಸಾಕಿದ್ದ ಎರಡು ಶ್ವಾನಗಳಿಗೆ ದುಷ್ಕರ್ಮಿಗಳು ವಿಷ ಹಾಕಿ ಸಾಯಿಸಿದ್ದರಿಂದ ಮನನೊಂದ ಗೃಹಿಣಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಚೀಡಿ ಚಿಕ್ಕನಹಳ್ಳಿಯಲ್ಲಿ ನಡೆದಿದೆ.
ಶ್ವೇತಾ (26) ಅವರ ಮನೆಯಲ್ಲಿ ಎರಡು ನಾಯಿಗಳನ್ನು ಸಾಕಲಾಗಿತ್ತು. ನಿತ್ಯ ಅವುಗಳನ್ನು ಅಕ್ಕರೆಯಿಂದ ನೋಡೊಳ್ಳುತ್ತಿದ್ದರು. ಮಧ್ಯಾಹ್ನ ಊಟ ಹಾಕಲು ಬಂದಾಗ ನಾಯಿಗಳು ಮೃತಪಟ್ಟಿದ್ದು ಕಂಡು ಶ್ವೇತಾ ದಿಗ್ಭ್ರಾಂತರಾದರು.
ಯಾರದ್ದೋ ಮೇಲಿನ ಕೋಪಕ್ಕೆ ಅಮಾಯಕ ಶ್ವಾನಗಳು ಬಲಿಯಾಗಿದ್ದರಿಂದ ದುಃಖ ತಡೆಯಲಾಗದೇ ಗರ್ಭಿಣಿಯಾಗಿದ್ದ ಶ್ವೇತಾ ವಿಷ ಸೇವಿಸಿದ್ದಾರೆ. ಗಂಭೀರವಾಗಿ ಅಸ್ವಸ್ಥಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವ ಸಂದರ್ಭ ಮೃತಪಟ್ಟಿದ್ದಾರೆ. ಶ್ವಾನಗಳ ಸಾವು ಗರ್ಭಿಣಿಯ ಸಾವಿಗೂ ಕಾರಣವಾಯಿತಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು.