ಉಮಾಶ್ರೀಗೆ ಸಚಿವ ಸ್ಥಾನ ನೀಡಲು ಆಗ್ರಹ
ಕನ್ನಡಪ್ರಭ ವಾರ್ತ್ಣೆ ದೊಡ್ಡಬಳ್ಳಾಪುರ್ಣ ಮೇ 13
ಈ ಬಾರಿ ನೇಕಾರರ ಪ್ರತಿನಿಧಿಯಾಗಿ ಆಯ್ಕೆಯಾಗಿರುವ ಏಕೈಕ ಶಾಸಕಿ ಉಮಾಶ್ರೀ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ರಾಜ್ಯ ನೂತನ ಸಿಎಂಗೆ ಅಭಿನಂದನೆಗಳನ್ನು ಸಲ್ಲಿಸಿರುವ ದೊಡ್ಡಬಳ್ಳಾಪುರದ ವಿವಿಧ ನೇಕಾರ ಸಂಘಟನೆಗಳು ಆಗ್ರಹಿಸಿವೆ.
ಕಾಂಗ್ರೆಸ್ ಹಿರಿಯ ಮುಖಂಡರೂ ಆಗಿರುವ ಅವರು, ವಿಧಾನಪರಿಷತ್ ಸದಸ್ಯರಾಗಿ ಕೂಡ ಸೇವೆ ಮಾಡಿದ ಅನುಭವ ಹೊಂದಿದ್ದಾರೆ.
ಹೀಗಾಗಿ ಉಮಾಶ್ರೀ ಅವರನ್ನು ಸಂಪುಟ ಸಚಿವರಾಗಿ ಘೋಷಿಸಬೇಕು ಎಂದು ಇಲ್ಲಿನ ದೇವಾಂಗ ಮಂಡಲಿ, ಶ್ರೀಗಾಯತ್ರಿಪೀಠ ಮಿತ್ರ ಬಳಗ, ಗಾಯತ್ರಿಪೀಠ ಯುವ ಬಳಗ, ಮಹಿಳಾ ಬಳಗ, ತೆಲುಗು ದೇವಾಂಗ ಸಂಘ, ಆಂಧ್ರದೇವಾಂಗ ಯೂತ್ಸ್ ಅಸೋಸಿಯೇಷನ್, ಪಟ್ಟಸಾಲಿ ಸಂಘ, ತೊಗಟವೀರರ ಸಂಘ, ಪದ್ಮಶಾಲಿ ಸಂಘ, ಕುರುಹಿನಶೆಟ್ಟಿ ಸಂಘ ಸೇರಿದಂತೆ ಅನೇಕ ಸಂಘಟನೆಗಳು ಆಗ್ರಹಿಸಿವೆ.
ಸ್ವಾಮೀಜಿ ಒತ್ತಾಯ: ನೇಕಾರ ಸಮುದಾಯದ ಪ್ರತಿನಿಧಿ ಎನಿಸಿರುವ ಉಮಾಶ್ರೀ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಬೇಕು ಎಂದು ಹಂಪಿ ಹೇಮಕೂಟ ಗಾಯತ್ರಿಪೀಠ ಮಹಾ ಸಂಸ್ಧಾನದ ದೇವಾಂಗ ದಯಾನಂದಪುರಿ ಸ್ವಾಮೀಜಿ ಕೂಡ ಒತ್ತಾಯಿಸಿದ್ದಾರೆ.