ಕಾಂಗ್ರೆಸ್ ಕಾರ್ಯಕರ್ತರ ವಿಜಯೋತ್ಸವ
ಮಾಗಡಿ: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಪಟ್ಟಣದ ಕಲ್ಯಗೇಟ್ ವೃತ್ತದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಡಗರ ಸಂಭ್ರಮದಿಂದ ವಿಜಯೋತ್ಸವ ಆಚರಿಸಿದರು.
ಇದೇ ವೇಳೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಜಿಂದಾಬಾದ್ ಎಂದು ಜೈಕಾರ ಹಾಕಿದರು. ಯುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ಪುರಸಭಾ ಸದಸ್ಯ ಎಂ.ಎನ್.ಮಂಜು, ಕೆ.ವಿ. ಬಾಲು, ಎಚ್.ಶಿವಕುಮಾರ್, ಸಿ. ಜಯರಾಮು, ಎಂ.ಎಚ್. ರಂಗನಾಥ್, ಮುತ್ತುರಾಜ್, ನಯಾಜ್, ರಹಮತ್, ಜೈಪ್ರಕಾಶ್, ಡಿ.ಗೌಡ, ಭೋಗೇಶ್, ಡಿ.ಸಿ.ಶಿವಣ್ಣ, ವಿ.ಜಿ. ಮಗಹೇಶ್, ರಂಗನಾಥ್, ನವೀನ್, ಮಹೇಶ್, ಕೆಂಪಣ್ಣ ಸೇರಿದಂತೆ ನೂರಾರು ಸಿದ್ದರಾಮಯ್ಯ ಅಭಿಮಾನಿಗಳು ಹಾಗು ಕಾರ್ಯಕರ್ತರು ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.