ತಾ.ಕಚೇರಿಯಲ್ಲಿ ಬಸವ ಜಯಂತಿ
ನೆಲಮಂಗಲ: ಸರ್ವರಿಗೂ ಸಮಬಾಳು, ಸಮಪಾಲು ತತ್ವದಡಿ ಸಮಾಜದಲ್ಲಿ ಎಲ್ಲರೂ ಒಂದೇ ಎಂದು ತೋರಿಸಿಕೊಟ್ಟಂವರು ಬಸವಣ್ಣನವರು ಎಂದು ತಹಶೀಲ್ದಾರ್ ವಿ.ರಾಜೇಂದ್ರ ನುಡಿದರು. ಅವರು ಸೋಮವಾರ ಪಟ್ಟಣದ ತಾಲೂಕು ಕಚೇರಿಯಲ್ಲಿ ಬಸವೇಶ್ವರ ಜಯಂತಿ ಪ್ರಯುಕ್ತ ಪೂಜೆ ಸಲ್ಲಿಸಿ ಮಾತನಾಡುತ್ತಾ ಬಸವಣ್ಣನವರ ತತ್ವ ಆದರ್ಶಗಳನ್ನು ನಾವೆಲ್ಲರೂ ಪಾಲಿಸುವಂತಹವರಾಗಬೇಕು. ಸಮಾಜದಲ್ಲಿರು ಕಷ್ಟ ಸುಖಗಳನ್ನು ಅರಿತು ಕಾರ್ಯನಿರ್ವಹಿಸಿದಾಗ ಮಾತ್ರ ಬಸವಣ್ಣನವರ ಸಿದ್ದಾಂತಕ್ಕೆ ಮಹತ್ವ ನೀಡಿದಂತಾಗುತ್ತದೆ ಎಂದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್.ರಾಜಶೇಖರ್, ಕಸಬಾ ಹೋಬಳಿ ರಾಜಸ್ವ ನಿರೀಕ್ಷಕ ರಾಜು, ಗ್ರಾಮ ಲೆಕ್ಕಾಧಿಕಾರಿ ರವಿ, ಕುಮಾರಸ್ವಾಮಿ, ಅಮಾನುಲ್ಲಾ, ಮುಜೀಖ್ ಇದ್ದರು.