ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ದಲಿತರು ಸಿಎಂ ಸ್ಥಾನದಿಂದ ದೂರ'

Rashmi Kasaragodu
Updated On : 14 May 2013, 12:44 pm

ಆನೇಕಲ್ಲು: ದಲಿತರೆಂದರೆ ಕಾಂಗ್ರೆಸ್, ಕಾಂಗ್ರೆಸ್ ಅಂದರೇ ದಲಿತರು ಎಂಬುದು ದೇಶ ಮನಗಂಡ ಸತ್ಯ. ದಲಿತ ಬಂಧುಗಳನ್ನು ಮತ ಬ್ಯಾಂಕ್‌ನಂತೆ ಉಪಯೋಗಿಸಿಕೊಂಡಿರುವ ಕಾಂಗ್ರೆಸ್ ರಾಜ್ಯದ ಸಿಎಂ ಗದ್ದುಗೆಯಲ್ಲಿ ದಲಿತ ನಾಯಕರೊಬ್ಬರನ್ನು ಕೂರಿಸದೇ ಇರುವುದು ಈ ನಾಡಿನ ದೌರ್ಭಾಗ್ಯ ಎಂದು ಕರ್ನಾಟಕ ಭೂ ಹೀನ ಹಾಗೂ ವಸತಿ ಹೀನರ ಸಂಘದ ರಾಜ್ಯಾಧ್ಯಕ್ಷ ತಿರುಪಾಳ್ಯ ಕೃಷ್ಣ ಆರೋಪಿಸಿದ್ದಾರೆ. ಅವರು ಪತ್ರಿಕೆಯೊಂದಿಗೆ ಮಾತನಾಡಿ, ನೆಹರು, ಇಂದಿರಾಜಿ, ರಾಜೀವ್ ಗಾಂಧಿರವರ ತಲೆಮಾರಿನಿಂದಲೂ ದಲಿತ ಬಂಧುಗಳು ಕಾಂಗ್ರೆಸ್ ಕೈ ಬಲಪಡಿಸುತ್ತಲೇ ಇದ್ದಾರೆ. ರಾಜ್ಯದ ಆಡಳಿತದಲ್ಲಿ ದಲಿತ ಮಂತ್ರಿಗಳು ಯಶಸ್ವಿಯಾಗಿ ತಮ್ಮ ಕಾರ್ಯ ನಿರ್ವಹಿಸಿದ್ದಾರೆ. ಬಸವಲಿಂಗಪ್ಪ, ಕೆ. ಹೆಚ್. ರಂಗನಾಥ್, ಬಿ. ರಾಚಯ್ಯ, ಕೇಶವಮೂರ್ತಿ ಹಾಗೂ ಖರ್ಗೆಯವರು ದಕ್ಷ ಹಾಗೂ ಸ್ವಚ್ಚ ಆಡಳಿತ ನೀಡಿದ್ದಾರೆ. ಇವರಾರನ್ನು ಸಿಎಂ ಗಾದಿಯ ಹತ್ತಿರಕ್ಕೂ ಕಾಂಗ್ರೆಸ್ ಬಿಟ್ಟುಕೊಳ್ಳಲಿಲ್ಲ. ಈ ಬಾರಿ ಖರ್ಗೆಯವರನ್ನು ಸಿಎಂ ಎಂದು ಬಿಂಬಿಸಿ ಪ್ರಪಾತಕ್ಕೆ ತಳ್ಳಲಾಗಿದೆ. ದಲಿತರ ಮತ ಬೇಕು, ಮುಖಂಡರು ಬೇಡವೆಂದರೇ ಸಾಮಾಜಿಕ ನ್ಯಾಯಕ್ಕೆ ಅರ್ಥವೆಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  ಮುಖಂಡರಾದ ವೆಂಕಟೇಶ್, ರಾಜೇಶ್, ರವಿ ಪ್ರಕಾಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement