ನನ್ನ ವಿರುದ್ಧ ಸುಳ್ಳು ಹೇಳಿಕೆ ನೀಡಿದರೆ ನೆಟ್ಟಗಿರೋಲ್ಲ
ಕ.ಪ್ರ.ವಾರ್ತ್ಣೆ ಮಾಗಡ್ಣಿ ಮೇ 13
ನನ್ನ ವಿರುದ್ಧ ಸುಳ್ಳು ಹೇಳಿಕೆ ನೀಡಿದರೆ ಮುಂದಿನ ಪರಿಣಾಮ ಎದುರಿಸಬೇಕಾದಿತು ಎಂದು ಕೆಜೆಪಿ ಪರಾಜಿತ ಅಭ್ಯರ್ಥಿ ಎಚ್.ಎಂ. ಕೃಷ್ಣಮೂರ್ತಿ, ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಎ.ಮಂಜುಗೆ ಎಚ್ಚರಿಕೆ ನೀಡಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಎ.ಮಂಜು ನನ್ನ ವಿರುದ್ಧವೇ ಮಚ್ಚೇಶ್ವರ, ಬೆಂಗಳೂರಿನಲ್ಲಿ ಹಣ ವಸೂಲಿ ಮಾಡಿ ಕೆಂಪೇಗೌಡ ಜಯಂತಿ ಮಾಡುತ್ತಾರೆ, ನಾನ್ಯಾವುದು ಹಣ ಕೊಡಬೇಕಿಲ್ಲ, 10 ಜನರಂತಹ ಜೇಡ್ರಳ್ಳಿ ಕೃಷ್ಣಪ್ಪ ಬಂದರೂ ನನ್ನನ್ನು ಏನು ಮಾಡಲಾರ ಎಂದು ಪತ್ರಿಕಾ ಹೇಳಿಕೆ ನೀಡುವ ಮೂಲಕ ನನ್ನ ವಿರುದ್ಧ ಹಗುರವಾಗಿ ಮಾತನಾಡುತ್ತಿದ್ದಾನೆ.
ನಾನು ಯಾರಿಂದಲಾದರೂ ಹಣ ಪಡೆದು ಚುನಾವಣೆ ಮಾಡಿದ್ದರೆ ಎ.ಮಂಜು ತೋರಿಸಲಿ, ಬಹಿರಂಗ ವೇದಿಕೆಗೆ ಬರಲು ಸಿದ್ದನಿದ್ದೇನೆ ಎಂದು ಸವಾಲು ಹಾಕಿದರು.
ಮಂಜುನಂತಹ ನೂರು ಜನ ಬಂದರೂ ನನ್ನ ಒಂದು ರೋಮ ಅಲುಗಾಡಿಸಲಾರರು ಎಂದು ಅವ್ಯಾಚಶಬ್ಧಗಳಿಂದ ನಿಂದಿಸಿದರಲ್ಲದೆ, ಎ.ಮಂಜು ಜೈಲಿಗೆ ಸೇರುವ ಮುನ್ನ, 2010 ರಲ್ಲಿ ಗ್ರಾ.ಪಂ. ಚುನಾವಣೆ ವೇಳೆ ನಾನು ಕೊಟ್ಟಿರುವ 3.50 ಕೋಟಿ ಕೂಡಲೆ ವಾಪಸ್ಸು ಮಾಡುವ ಮೂಲಕ ಋಣಮುಕ್ತನಾಗಬೇಕು. ಇಲ್ಲದಿದ್ದರೆ ಮುಂದಿನ ಪರಿಣಾಮ ಎದುರಿಸಬೇಕಾದಿತು ಎಂದು ಜೇಡ್ರಳ್ಳಿ ಕೃಷ್ಣಪ್ಪ ಎಚ್ಚರಿಸಿದ್ದಾರೆ. ಕೂಡಲೆ ಹಣ ವಾಪಸ್ಸು ಮಾಡದಿದ್ದರೆ ಕಾನೂನು ಕ್ರಮ ಜರುಗಿಸುವುದಾಗಿಯೂ, ನೀನು ಬರೆದು ಕೊಟ್ಟಿರುವ ಜಮೀನಿಗೆ ಇದೇ ತಿಂಗಳೊಳಗೆ ಕಾಂಪೌಂಡ್ ಹಾಕುವುದಾಗಿ ಎ.ಮಂಜುಗೆ ಎಚ್ಚರಿಸಿದರು. ವಕೀಲ ಮಧು ಮೂಲಕ ಎಚ್.ಸಿ. ಬಾಲಕೃಷ್ಣ ಅವರಿಂದ ಜೇಡ್ರಳ್ಳಿ ಕೃಷ್ಣಪ್ಪ ಹಣ ಪಡೆದು ನನ್ನ ವಿರುದ್ಧ ಚುನಾವಣೆ ಮಾಡಿದರು ಎಂದು ಹೇಳಿಕೊಳ್ಳುತ್ತಿರುವ ಎ.ಮಂಜು, ತಾಕತ್ತಿದ್ದರೆ ಸಾಬೀತು ಪಡಿಸಬೇಕು. ನಾನು ಯಾರಿಂದೂ ಹಣ ಪಡೆದಿಲ್ಲ, ಕೋಟಿ ಕೋಟಿ ಹಣ ಸ್ವಂತ ದುಡಿಮೆಯಿಂದ ಸಂಪಾದಿಸಿ ಕಳೆದ 15 ವರ್ಷಗಳಿಂದಲೂ ಸಮಾಜ ಸೇವೆ ಮಾಡುತ್ತಿದ್ದೇನೆ. ಸ್ನೇಹಿತರು, ಬಂಧುಗಳು ಸಹ ನನ್ನ ಸಮಾಜ ಸೇವೆಗೆ ಕೈಜೋಡಿಸಿ ಸಹಕರಿಸುತ್ತಾರೆ ಎಂದರು. ಕೊಟ್ಟವರ ವಡವೆ ಕೊಡಲಾಗದೆ ಬೆಂಗಳೂರಿನಲ್ಲಿ ದಿನಕ್ಕೊಂದು ಲಾಡ್ಜ್‌ಬದಲಾಯಿಸಿ ತಲೆಮರೆಸಿಕೊಂಡು ತಿರುಗುತ್ತಿರುವ ಎ.ಮಂಜು ನಿಜಕ್ಕೂ ವಂಚಕ, ಜನಸೇವೆಗೆ ಅನರ್ಹ. ಒಕ್ಕಲಿಗರನ್ನು ಟೀಕಿಸುವ ಮಟ್ಟಕ್ಕೆ ಬೆಳೆದಿರುವುದು ಸರಿಯಾದ ಕ್ರಮವಲ್ಲ. ಎ.ಮಂಜು ಸ್ವತಂತ್ರವಾಗಿ ಚುನಾವಣೆಗೆ ಸ್ಪರ್ಧಿಸಲಿ, ನಾನೂ ಸ್ವತಂತ್ರವಾಗಿ ಸ್ಪರ್ಧಿಸುತ್ತೇನೆ ಯಾರು ಗೆಲ್ಲುತ್ತಾರೆ ನೋಡೋಣ ಎಂದು ಎ.ಮಂಜು ವಿರುದ್ಧ ಎಚ್.ಎಂ.ಕೃಷ್ಣಮೂರ್ತಿ ಸವಾಲು ಹಾಕಿದರು.