ಬೈಕ್‌ಗೆ ಲಾರಿ ಡಿಕ್ಕಿ ತಾಯಿ, ಮಗು ಸಾವು
ಕನ್ನಡಪ್ರಭವಾರ್ತ್ಣೆ ನೆಲಮಂಗಲ್ಣ ಮೇ 13
ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ 4ರ ಮಾದಾವಾರ ಬಳಿ ಲಾರಿಯೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ತಾಯಿ ಮತ್ತು ಮಗು ಇಬ್ಬರೂ ಮೃತಪಟ್ಟ ದುರ್ಘಟನೆ ಸೋಮವಾರ ನಡೆದಿದೆ.
ಹಾಸನ ಮೂಲದವರಾದ ಚೈತ್ರ(28) ಮತ್ತು ಆಕೆಯ ಮಗ ಮದುರಂಗ(6) ಮೃತಪಟ್ಟ ದುರ್ದೈವಿಗಳು, ಚೈತ್ರಳ ಪತಿ ಶೇಖರ್ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಸನ ಮೂಲದವರಾದ ದಂಪತಿಗಳು ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದರು. ಕಳೆದ ಮೂರು ದಿನಗಳಿಂದ ರಜೆ ಇದ್ದುದ್ದರಿಂದ ತಮ್ಮ ಸ್ವಂತ ಊರಾದ ಹಾಸನಕ್ಕೆ ಹೋಗಿದ್ದು ಸೋಮವಾರ ಬೆಂಗಳೂರಿಗೆ ಬೈಕಿನಲ್ಲಿ ಹಿಂತಿರುಗುತ್ತಿದ್ದಾಗ ಮಾದನಾಯಕನಹಳ್ಳಿ ಬಳಿಯ ಟಿ.ಸಿ.ಐ ಬಂಕ್ ಬಳಿ ಈ ಘಟನೆ ಸಂಭವಿಸಿದೆ. ನೈಸ್ ರಸ್ತೆ ಮತ್ತು ಹೆದ್ದಾರಿಯ ಸರ್ವೀಸ್ ರಸ್ತೆ ಕೂಡುವ ಸ್ಥಳದಲ್ಲಿ ನೈಸ್ ರಸ್ತೆಯ ಮೂಲಕ ಹೆದ್ದಾರಿಯ ಹೈವೆಗೆ ವೇಗವಾಗಿ ಬಂದ ಲಾರಿ ಏಕಾಏಕಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬೈಕ್‌ನ ಹಿಂದೆ ಮಗುವನ್ನು ಹಿಡಿದುಕೊಂಡು ಕುಳಿತ್ತಿದ್ದ ಚೈತ್ರ ಆಯ ತಪ್ಪಿ ರಸ್ತೆಗೆ ಬಿದ್ದಿದ್ದಾರೆ. ಆಕೆಯ ತಲೆಯ ಮೇಲೆ ಲಾರಿ ಚಕ್ರ ಹರಿದಿದೆ. ಆಕೆ ಸ್ಥಳದಲ್ಲಿಯೇ ಮೃತಪಟ್ಟರೆ ಮಗುವಿನ ತಲೆಗೂ ತೀವ್ರ ಗಾಯವಾಗಿ ಮಗು ಸಹ ಕೊನೆಯುಸಿರೆಳೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿ ಮತ್ತು ಲಾರಿ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾದನಾಯಕನಹಳ್ಳಿ ಪೊಲೀಸರು ತಿಳಿಸಿದ್ದಾರೆ.