ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸಂಭ್ರಮದ ಕರಲಹಳ್ಳಿ ಬಸವಣ್ಣ ರಥೋತ್ಸವ

Rashmi Kasaragodu
Updated On : 14 May 2013, 12:40 pm

ಮಾಗಡಿ: ಜನಪದ ಸೊಗಡು ಸೂಸುವ ಕರಲಹಳ್ಳಿ ಬಸವಣ್ಣನ ಜಾತ್ರೆ ಬಹಳ ವಿಜೃಂಭಣೆಯಿಂದ ನೆರವೇರಿತು. ಜಾತ್ರಾ ಮಹೋತ್ಸವದ ಪ್ರಯುಕ್ತ ಬಸವಣ್ಣನ ದೇವರ ರಥೋತ್ಸವ ಬಹಳ ಅದ್ದೂರಿಯಾಗಿ ನಡೆಯಿತು.
ರೈತರು ತಮ್ಮ ರಾಸುಗಳೊಂದಿಗೆ ದೇವಸ್ಥಾನಕ್ಕೆ ತೆರಳಿ ಭಕ್ತಿಭಾವದಿಂದ ಪೂಜಿಸಿ ರಾಸುಗಳನ್ನು ದೇವಾಲಯದ ಸುತ್ತಲು ಪ್ರದಕ್ಷಣೆ ಹಾಕಿಸಿದರು.
ಗಂಗೆ ಗೌರಿ ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು. ರಾಜ್ಯದ ವಿವಿಧ ಮೂಲಗಳಿಂದ ಸಹಸ್ರಾರು ಭಕ್ತರು ಆಗಮಿಸಿ ಬಸವಣ್ಣ ದೇವರಿಗೆ ಶ್ರದ್ಧಾಭಕ್ತಿಯಿಂದ ಪೂಜೆ ನೆರವೇರಿಸಿದರು.ಜಾತ್ರೆ ಪ್ರಯುಕ್ತ  ಪ್ರಸಾದ ವಿನಿಯೋಗ ಅವಿರತವಾಗಿ ನಡೆಯಿತು.
ಭಕ್ತರು ಸಡಗರ ಸಂಭ್ರಮದಿಂದ ರಥೋತ್ಸವ ಎಳೆದು ಪುನೀತರಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement