ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಹಾಲು ಪ್ರೋತ್ಸಾಹ ಧನ ಹೆಚ್ಚಳ ಸ್ವಾಗತ

Rashmi Kasaragodu
Updated On : 14 May 2013, 12:43 pm

ರಾಮನಗರ: ಪ್ರತಿ ಲೀಟರ್ ಹಾಲಿಗೆ ಸರ್ಕಾರದ ಪ್ರೋತ್ಸಾಹ ಧನವನ್ನು 4ಕ್ಕೆ ಹೆಚ್ಚಳ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ಧಾರವನ್ನು ಕೆಎಂಎಫ್ ನಿರ್ದೇಶಕ ಪಿ.ನಾಗರಾಜು ಸ್ವಾಗತಿಸಿದ್ದಾರೆ.  ಹಾಲಿನ ಪ್ರೋತ್ಸಾಹ ಧನ ಹೆಚ್ಚಳದಿಂದ ಸರ್ಕಾರಕ್ಕೆ ವಾರ್ಷಿಕ 492 ಕೋಟಿ ಹೆಚ್ಚುವರಿ ಹೊರೆಯಾಗಲಿದೆ. ಆದಾಗ್ಯೂ ಸಿದ್ದರಾಮಯ್ಯ ಅವರು ರೈತ ಪರವಾದ ಕಾಳಜಿಯಿಂದ ದಿಟ್ಟ ನಿರ್ಧಾರ ಘೋಷಿಸಿರುವುದು ಸ್ವಾಗತಾರ್ಹ ಎಂದು ಅವರು ತಿಳಿಸಿದ್ದಾರೆ.  ಶೇ.70ರಷ್ಟು ಹಾಲು ಉತ್ಪಾದಕರು ಹಳೆ ಮೈಸೂರು ಭಾಗದ ರೈತರಾಗಿದ್ದಾರೆ. ಹೀಗಾಗಿ ನೂತನ ಮುಖ್ಯಮಂತ್ರಿಯ ಘೋಷಣೆಯಿಂದ ಒಕ್ಕಲಿಗ ಸಮುದಾಯಕ್ಕೆ ವಿಶೇಷ ಕೊಡುಗೆ ಸಿಕ್ಕಂತಾಗಿದೆ ಎಂದು ನಾಗರಾಜು ಅಭಿಪ್ರಾಯಪಟ್ಟಿದ್ದಾರೆ.
ಎಂಟಿಬಿ ಗೆಲವು; ಹಾಲಿನ ಅಭಿಷೇಕ
ಸೂಲಿಬೆಲೆ: ಹೊಸಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂಟಿಬಿ ನಾಗರಾಜ್ ಗೆಲವು ಸಾಧಿಸಿದ್ದರಿಂದ ಸೂಲಿಬೆಲೆಯಲ್ಲಿ ಅಭಿಮಾನಿಯೊಬ್ಬರು ಶಿವನ ಮೂರ್ತಿಗೆ 101 ಲೀಟರ್ ಹಾಲಿನ ಅಭಿಷೇಕ ಮಾಡಿದ್ದಾರೆ. ಸೋಮವಾರ ಇಲ್ಲಿನ ಕುರುಬರಪೇಟೆಯ ನಿವಾಸಿ ಮುನಿರಾಜ್ ದೇವರಿಗೆ ಹಾಲಿನ ಅಭಿಷೇಕ ಮಾಡಿಸುವ ಮೂಲಕ ತಮ್ಮ ನಾಯಕನ ಮೇಲಿನ ಅಭಿಮಾನವನ್ನು ಮೆರೆದಿದ್ದಾರೆ. ನಾಗರಾಜ್ ವಿಜಯಶಾಲಿಯಾಗಿದ್ದರಿಂದ ಖುಷಿಗೊಂಡ ಅಭಿಮಾನಿ ಮುನಿರಾಜ್‌ಇಲ್ಲಿನ ಐತಿಹಾಸಿಕ ಗಿಂಡ್ಲ ಬಾವಿಯ ಸೋಮೇಶ್ವರ ದೇಗುಲದಲ್ಲಿ ಶಿವ ಮೂರ್ತಿಗೆ 101 ಲೀಟರ್ ಹಾಲಿನ ಅಭಿಷೇಕ ಮಾಡಿಸಿ ಹರಕೆಯನ್ನು ತೀರಿಸಿದರು.
ಲಿಂಗಾಯಿತರಿಂದ ಅಭಿನಂದನೆ
ಸೂಲಿಬೆಲೆ: ಹೊಸಕೋಟೆ ಕ್ಷೇತ್ರದಲ್ಲಿ ಗೆದ್ದ ಎಂಟಿಬಿ ನಾಗರಾಜ್ ಅವರಿಗೆ ಸೂಲಿಬೆಲೆ ಲಿಂಗಾಯಿತ ಸಮುದಾಯದವರು ಅಭಿನಂದನೆ ಸಲ್ಲಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಶಿವರುದ್ರಪ್ಪ ಹೊಸಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಅಭ್ಯರ್ಥಿಯಾಗಿ ಸಚಿವರನ್ನು ಮಣಿಸಿದ ನಾಗರಾಜ್ ಅವರಿಗೆ ಲಿಂಗಾಯಿತ ಸಮುದಾಯ ಮುಖಂಡರಾದ ಮಾಜಿ ಪ್ರಧಾನರಾದ ಪುಟ್ಟಸ್ವಾಮಪ್ಪ, ರುದ್ರಮೂರ್ತಿ, ಜುಂಜಪ್ಪ, ನಾಗರಾಜ್, ಚಂದ್ರಶೇಖರ್, ಮುತ್ತಣ್ಣ, ವೀರಭದ್ರಪ್ಪ, ಬುಳಪ್ಪ,ಸೇರಿದಂತೆ ಹೊಸಕೋಟೆ ತಾಲೂಕಿನ ಸಮಸ್ತ ಲಿಂಗಾಯಿತ ಸಮುದಾಯದವರು ನೂತನ ಶಾಸಕರನ್ನು ಅಭಿನಂದಿಸಿದ್ದು, ಹೆಚ್ಚು ಮತನೀಡಿ ಗೆಲ್ಲಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement