ಚಿಂಚನಸೂರ್ಗೆ ಸಚಿವ ಸ್ಥಾನ: ಬೆಸ್ತರ ಸಮಾಜ ಆಗ್ರಹ
ಮಾಗಡಿ: ಗುರುಮಠಕಲ್ನಿಂದ ಈ ಬಾರಿ ಗೆದ್ದಿರುವ ನೂತನ ಶಾಸಕ ಬಾಬೂರಾವ್ ಚಿಂಚನಸೂರ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂತ್ರಿಮಂಡಲದಲ್ಲಿ ಸಚಿವ ಸ್ಥಾನ ನೀಡುವಂತೆ ಬೆಸ್ತರ ಸಮಾಜದ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಪುರಸಭಾಧ್ಯಕ್ಷ ಪಿ.ವಿ. ಸೀತಾರಾಂ ಮತ್ತಿತರೆ ಮುಖಂಡರು ಆಗ್ರಹಿಸಿದ್ದಾರೆ. ರಾಜ್ಯದ ಅಭಿವೃದ್ಧಿಗೆ ತನ್ನದೇ ಆದ ಯೋಜನೆಗಳ ರೂಪಿಸಲು ಹೆಚ್ಚು ಕಾಳಜಿಯುಳ್ಳವರಾಗಿದ್ದಾರೆ. ಇಂತಹ ಶಾಸಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಂತ್ರಿಮಂಡಲದಲ್ಲಿ ಸಚಿವ ಸ್ಥಾನ ನೀಡಿದರೆ ಉತ್ತಮ ಆಡಳಿತ ನಡೆಸುವ ಮೂಲಕ ಪಕ್ಷದ ಸಂಘಟನೆಗೆ ಶಕ್ತಿ ಮೀರಿ ಶ್ರಮಿಸಲಿದ್ದಾರೆ ಎಂದರು.