ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

'ಪೋಷಕರಿಗೆ ಮಕ್ಕಳ ಕಲಿಕೆ ಕಾಳಜಿ ಇರಲಿ'

Vishwanath S
Updated On : 15 May 2013, 12:24 pm

ಕ.ಪ್ರ. ವಾರ್ತೆ ,   ದೇವನಹಳ್ಳಿ ,   ಮೇ 14
ಈ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ದೇವನಹಳ್ಳಿ ಸ್ಟರ್ಲಿಂಗ್ ಶಾಲೆಯ ಮೂವರು  ವಿದ್ಯಾರ್ಥಿನಿಯರಿಗೆ ಶಾಸಕರಾದ ಪಿಳ್ಳಮುನಿಶಾಮಪ್ಪರವರು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು.
ಶಾಲೆಯ ವಿದ್ಯಾರ್ಥಿನಿ ಎಸ್.ಎನ್.ತನುಷ ತನ್ನ ಶಾಲೆಗೆ ಅಲ್ಲದೆ ದೇವನಹಳ್ಳಿ ತಾಲೂಕು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿ ಶೋಭೆ ತರುವ ಕೆಲಸ ಮಾಡಿದ್ದಾರೆ ಎಂದರಲ್ಲದೆ ಇದೇ ಶಾಲೆಯ ಸೌಂದರ್ಯ ಹಾಗೂ ನಿವೇದಿತ ಇವರುಗಳು ಉತ್ತಮ ಅಂಕಗಳಿಸಿ ಶಾಲೆಗೆ ಮಾದರಿಯಾಗಿದ್ದಾರೆ ಎಂದರು. ಪೋಷಕರು ವಿದ್ಯಾರ್ಥಿಗಳನ್ನು ಕೇವಲ ಶಾಲೆಗೆ ಕಳುಹಿಸುವುದು ಮುಖ್ಯವಲ್ಲ, ಅವರ ಕಲಿಕೆ ಬಗ್ಗೆ ಕಾಳಜಿ ವಹಿಸಬೇಕು ಎಂದರಲ್ಲದೆ ಶಾಲೆಗೆ ತಮ್ಮ ಸಹಕಾರ ಯಾವಾಗಲೂ ಇರುತ್ತದೆ ಎಂದರು.
ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಕೆ.ಬಿ.ಅಶೋಕ್‌ರವರು ಮಾತನಾಡಿ ಈ ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಅಂಕದ ಜೊತೆಯಲ್ಲಿ ಒಳ್ಳೆ ನಡೆತೆ ಕಲಿಯಲು ಪೋಷಕರ ಸಹಕಾರ ಅಗತ್ಯವಾಗಿದೆ. ಅಲ್ಲದೆ ತಾವು ಮನಸು ಮಾಡಿದ್ದರೆ ಯಾವ ರೂಪದಲ್ಲಾದರೂ ಹಣ ಸಂಪಾದಿಸಬಹುದಾಗಿತ್ತು. ಆದರೆ ಮಕ್ಕಳಿಗೆ  ವಿದ್ಯೆ ನೀಡುವ ಕೆಲಸ ಆತ್ಮ ತೃಪ್ತಿ ತಂದಿದೆ ಎಂದರು.
ಶಾಸಕರಾದ ಪಿಳ್ಳಮುನಿಶಾಮಪ್ಪರವರು ವಿದ್ಯಾರ್ಥಿನಿಯರಿಗೆ ಸ್ಮರಣ ಫಲಕ ನೀಡುವುದರ ಜೊತೆಯಲ್ಲಿ ಪ್ರತಿ ವಿದ್ಯಾರ್ಥಿನಿಗೆ ತಲಾ ಐದು ಸಾವಿರು ರೂ ಪ್ರೋತ್ಸಾಹ ಧನ ನೀಡುವುದಾಗಿ ತಿಳಿಸಿದರು. ತಾಲೂಕು ಜೆಡಿಎಸ್ ಅಧ್ಯಕ್ಷ ಮುನಿಶಾಮಯ್ಯ ಹಾಗೂ ನಗರ ಜೆಡಿಎಸ್ ಅಧ್ಯಕ್ಷ ನಾರಾಯಣಸ್ವಾಮಿ ಉಪ್ಸಥಿತರಿದ್ದರು. ಮುಖ್ಯ ಶಿಕ್ಷಕರಾದ ಪ್ರಶಾಂತ್ ಸ್ವಾಗತ ಕೋರಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement