ಸಿಎಂ ಸಿದ್ದು; ಕುರುಬ ಸಮಾಜದವರ ಸಂಭ್ರಮ
ಕನ್ನಡಪ್ರಭ ವಾರ್ತೆ , ಕನಕಪುರ , ಮೇ 14
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯನವರು ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಕನಕಪುರದ ಕುರುಬ ಸಮಾಜದ ಮುಖಂಡರುಗಳು ಇಲ್ಲಿನ ಚನ್ನಬಸಪ್ಪ ವೃತ್ತದಲ್ಲಿ ಪಟಾಕಿಗಳನ್ನು ಸಿಡಿಸಿ ಸಿಹಿ ಹಂಚಿ ಸಂಭ್ರಮ ಆಚರಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಬೀರೇಶ್, ಸತೀಶ್‌ಕುಮಾರ್, ಕೆ.ಎಲ್.ಮಂಜುನಾಥ್, ರಮೇಶ್, ಚಂದ್ರ, ಉಮೇಶ್, ನಂಜುಂಡಪ್ಪ ರಾಜು ಮತ್ತಿತರರು ಪಾಲ್ಗೊಂಡಿದ್ದರು.