ಕೃಷಿ, ಗೃಹೋಪಯೋಗಿ ವಸ್ತು ಪ್ರದರ್ಶನ ಉದ್ಘಾಟನೆ
ದೇವನಹಳ್ಳಿ: ಬೆಂಗಳೂರಿನ ಕೃಷಿ ಮತ್ತು ಗ್ರಾಹಕರ ಅಭಿವೃದ್ಧಿ ಸಂಸ್ಥೆಯವರು ದೇವನಹಳ್ಳಿ ತಾಲೂಕು ರೇಷ್ಮೆ ಇಲಾಖೆ, ತೋಟಗಾರಿಕೆ ಇಲಾಖೆ, ನವಜ್ಯೋತಿ ಪ್ರಕಾಶನ ಹಾಗೂ ಗೃಹ ಬಳಕೆ ವಸ್ತುಗಳ ತಯಾರಕರಿಂದ ಆಯೋಜಿಸಿದ್ದ ಮೂರು ದಿನಗಳ ವಸ್ತು ಪ್ರದರ್ಶನವನ್ನು ಶಾಸಕರಾದ ಪಿಳ್ಳಮುನಿಶಾಮಪ್ಪರವರು ಇಲ್ಲಿನ ಗುರುಭವನದಲ್ಲಿ ಬುಧವಾರ ಉಧ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹುಲಿಕಲ್ ನಟರಾಜ್ರವರು ಮಾತನಾಡಿದರು. ಎ.ಎಂ.ಸುರೇಶ್ ಸ್ವಾಗತ ಕೋರಿದರು. ಜೆಡಿಎಸ್ ತಾ.ಅಧ್ಯಕ್ಷರಾದ ಮುನಿಶಾಮಯ್ಯ, ನವಜ್ಯೋತಿ ಪ್ರಕಾಶನದ ರಾಜಣ್ಣ ಉಪಸ್ಥಿತರಿದ್ದರು.