ಕೆಎಸ್‌ಒಯು ಪರೀಕ್ಷಾ ಶುಲ್ಕ ನಿಗದಿ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಬಿಎಲ್‌ಐಎಸ್ಸಿ ಮತ್ತು ಎಂಎಲ್‌ಐಎಸ್ಸಿ ಪದವಿ ವಾರ್ಷಿಕ ಪರೀಕ್ಷೆಗಳು 2013ರ ಜೂನ್ ಮಾಹೆಯಲ್ಲಿ ನಡೆಯಲಿವೆ.
ಈ ಪರೀಕ್ಷೆಗಳಿಗೆ ದಂಡ ಶುಲ್ಕವಿಲ್ಲದೆ ಪರೀಕ್ಷಾ ಶುಲ್ಕ ಪಾವತಿಸಲು ಮೇ 21 ಕಡೆಯ ದಿನವಾಗಿರುತ್ತದೆ. ರು.200 ದಂಡ ಶುಲ್ಕದೊಂದಿಗೆ ಪಾವತಿಸಲು ಜೂನ್ 5 ಕಡೆಯ ದಿನ. ಬಿಲ್‌ಎಲ್‌ಐಎಸ್ಸಿ ಪೂರ್ಣ ಪರೀಕ್ಷೆಗೆ ಹಾಗೂ 5 ಮತ್ತು ಅದಕ್ಕೂ ಹೆಚ್ಚಿನ ಪತ್ರಿಕೆಗಳಿಗೆ ರು.900, ಒಂದಕ್ಕೆ ರು.450, ಎರಕ್ಕೆ ರು.500, ಮೂಕ್ಕೆ ರು.700, ನಾಲ್ಕು ಪತ್ರಿಕೆಗಳಿಗೆ ರು.750 ಶುಲ್ಕ ನಿಗದಿಪಡಿಸಿದೆ.
ಎಂಎಲ್‌ಐಎಸ್ಸಿ ಪೂರ್ಣ ಪರೀಕ್ಷೆಗೆ ಹಾಗೂ 6 ಮತ್ತು ಅದಕ್ಕೂ ಹೆಚ್ಚಿನ ಪತ್ರಿಕೆಗಳಿಗೆ ರು.1450, ಒಂದು ಪತ್ರಿಕೆಗೆ ರು.500, ಎರಡು ಪತ್ರಿಕೆಗೆ ರು.700, ಮೂರು ಪತ್ರಿಕೆಗೆ ರು.900, ನಾಲ್ಕು ಪತ್ರಿಕೆಗಳಿಗೆ ರು.1100 ಹಾಗೂ 5 ಪತ್ರಿಕೆಗೆ ರು.1200 ಶುಲ್ಕ ನಿಗದಿಪಡಿಸಿದೆ.
ಶುಲ್ಕ ಪಾವತಿಸುವ ಅರ್ಜಿಯನ್ನು ಅಂಚೆ ಮೂಲಕ ವಿದ್ಯಾರ್ಥಿಗಳಿಗೆ ಕಳುಹಿಸಲಾಗಿದ್ದು, ಅಂಚೆ ತಲುಪದಿರುವ ವಿದ್ಯಾರ್ಥಿಗಳು ಪ್ರಾದೇಶಿಕ ನಿರ್ದೇಶಕರ ಕಚೇರಿ, ಪ್ರಾದೇಶಿಕ ಕೇಂದ್ರ, ಶಾಂತಿನಿಕೇತನ ಶಿಕ್ಷಣ ಸಂಸ್ಥೆ, ರಾಮನಗರ ಇಲ್ಲಿ ಖುದ್ದಾಗಿ ಪಡೆಯಬಹುದು. ವಿವಿ ವೆಬ್ಸೈಟ್ ಅಥವಾ ರಾಮನಗರ ಪ್ರಾದೇಶಿಕ ಕಚೇರಿ ದೂ 080-27274443 ಸಂಪರ್ಕಿಸಿ.