ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಭಗವದ್ರಾಮಾನುಜರ ಜಯಂತಿ, ಮೆರವಣಿಗೆ

Vishwanath S
Updated On : 16 May 2013, 12:49 pm

ಕ.ಪ್ರ. ವಾರ್ತೆ ,  ದೇವನಹಳ್ಳಿ ,  ಮೇ 15
ತಾಲೂಕು ವಿಶಿಷ್ಟಾದ್ವೈತ ವೈಶ್ಣವ ಸಂಘದ ಆಶ್ರಯದಲ್ಲಿ ಬೇಸಿಗೆ ಆಗಮಿ ಶಿಬಿರ, ಭಗವದ್ರಾಮಾನುಜರ ತಿರುನಕ್ಷತ್ರ ಮತ್ತು ಸಾಮೂಹಿಕ ಉಪನಯನ ಸಮಾರಂಭ ಹಾಗೂ ಉಪನ್ಯಾಸ ಸಮಾರಂಭ ಇಲ್ಲಿನ ಎಸ್ಎಲ್ಎನ್ ಕನ್ವೆನ್ಷನ್ ಹಾಲ್ನಲ್ಲಿ ಬುಧವಾರ ಆಯೋಜಿಸಲಾಗಿತ್ತು.
ತಾಲೂಕು ವೈಶ್ಣವ ಸಂಘದ ಅಧ್ಯಕ್ಷರಾದ ಗೋಪಾಲಕೃಷ್ಣರವರು ಉಪನ್ಯಾಸ ನೀಡಿ ಪ್ರತಿವರ್ಷದಂತೆ ಈ ಬಾರಿಯೂ ಶ್ರೀ ಭಗವದ್ರಾರಾಮುನುಜರ ತಿರುನಕ್ಷತ್ರ ಮತ್ತು ಸಾಮೂಹಿಕ ಉಪನಯನ ಆಯೋಜಿಸುತ್ತಿದ್ದು 35 ಮಕ್ಕಳು ಉಪನಯನ ಶಿಬಿರದಲ್ಲಿ ಭಾಗವಹಿಸಿರುವುದು ಅಭಿನಂದನೀಯ. ಎಂದರು.
ಇದೇ ಸಂಧರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ರಾಜಣ್ಣ, ಭರತನಾಟ್ಯ ಕಲಿಸುವ ಗುರುಗಳಾದ ಬಿ. ಸುಧೀರ್, ಬಿದಲೂರು ಲಕ್ಷ್ಮೀಪತಾಚಾರ್ ಹಾಗೂ ಚಿಂತಾಮಣಿಯ ಅನಂತಾಚಾರ್ ಇವರುಗಳಿಗೆ ಸನ್ಮಾನಿಸಲಾಯಿತು.  ಶಿಬಿರದ ಸಮಾರೋಪ ಅಂಗವಾಗಿ ಶ್ರೀ ಭಗವದ್ರಾಮಾನುಜರ ಭಾವಚಿತ್ರದ ಮೆರವಣಿಗೆಯನ್ನು ಪಟ್ಟಣದಲ್ಲಿ ಮಾಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement