ರೈತರಿಗೆ ಉಚಿತ ಟ್ರ್ಯಾಕ್ಟರ್ ಡಿಎಲ್ ವಿತರಿಸಿದ ರೋಟರಿ
ಕನಕಪುರ: ಬಹುತೇಕ ರೈತರು ಟ್ರ್ಯಾಕ್ಟರ್ ನಡೆಸಲು ಚಾಲನಾ ಪರವಾನಗಿ ಹೊಂದಿರದ ಕಾರಣ ಅಪಘಾತಗಳು ಸಂಭವಿಸಿದರೆ ಯಾವುದೇ ಪರಿಹಾರ ಸಿಗದೆ, ಸಂಕಷ್ಟಗಳಿಗೆ ಸಿಲುಕುತ್ತಿದ್ದಾರೆ. ಇದನ್ನು ನಿವಾರಿಸಲು ರೋಟರಿ ಸಂಸ್ಥೆ ಗ್ರಾಮೀಣ ರೈತರಿಗೆ ಟ್ರ್ಯಾಕ್ಟರ್ ಚಾಲನಾ ತರಬೇತಿಯನ್ನು ಉಚಿತವಾಗಿ ಒದಗಿಸಿ ಚಾಲನಾ ಪರವಾನಗಿಯನ್ನು ಉಚಿತವಾಗಿ ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ.
ಪ್ರಸಕ್ತ ಸಾಲಿನಲ್ಲಿ ಕನಕಪುರ ರೋಟರಿವತಿಯಿಂದ 150 ಜನರಿಗೆ ಪರವಾನಗಿ ವಿತರಿಸಲಾಗುತ್ತಿದೆ ಎಂದು ರೋಟರಿ ಅಧ್ಯಕ್ಷ ಸಿ.ವಿಜಯ್ ಹೇಳಿದ್ದಾರೆ.
ಅವರು ಕನಕಪುರ ರೋಟರಿ ಭವನದಲ್ಲಿ ತರಬೇತಿ ಪಡೆದ ಮೊದಲ ಹಂತದ 20 ರೈತರಿಗೆ ಚಾಲನಾ ಪರವಾನಗಿ ವಿತರಿಸುತ್ತಾ ಮಾತನಾಡಿದರು. ಡಿಕೆಎಸ್ ಡ್ರೈಂವಿಂಗ್ ಶಾಲೆಯ ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು.