ಆರ್ಟಿಇಯಡಿ ದಾಖಲಿಗೆ ಮನವಿ
ದೇವನಹಳ್ಳಿ: 2013-14ನೇ ಸಾಲಿನಲ್ಲಿ ಶೇ.25 ಮೀಸಲಾತಿ ಅಡಿಯಲ್ಲಿ ಎಲ್ಕೆಜಿ ಮತ್ತು ಒಂದನೇ ತರಗತಿಗೆ ಆಯ್ಕೆಯಾಗಿರುವ ವಿದ್ಯಾರ್ಥಿಗಳನ್ನು ಪೋಷಕರು ಮೇ 21ರೊಳಗಾಗಿ ದಾಖಲಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೇ 20 ರೊಳಗಾಗಿ ಮಕ್ಕಳನ್ನು ದಾಖಲಿಸದೇ ಇದ್ದಲ್ಲಿ ಆ ಸೀಟುಗಳನ್ನು ಅಸಿಂಧುಗೊಳಿಸಿ ಖಾಲಿ ಸೀಟುಗಳೆಂದು ಘೋಷಿಸಿ ಉಳಿದ ಖಾಲಿ ಸೀಟುಗಳ ಆಯ್ಕೆಯನ್ನು ಎರಡನೇ ಸುತ್ತಿನಲ್ಲಿ ಮೇ 30ರೊಳಗೆ ಆಯಾ ಶಾಲೆಗಳಲ್ಲಿಯೇ ನಿಯಮಾನುಸಾರ ನಡೆಸಲಾಗುವುದು. ಮೊದಲು ಯಾವ ಶಾಲೆಗೆ ಅರ್ಜಿ ಸಲ್ಲಿಸಲಾಗಿದೆಯೋ ಆ ಅರ್ಜಿಗಳನ್ನು ಅದೇ ಶಾಲೆಯ ಆಯ್ಕೆ ಪ್ರಕ್ರಿಯೆಯಲ್ಲಿ ಪರಿಗಣಿಲಾಗುವುದು. ಒಂದು ಶಾಲೆಯಲ್ಲಿ ಪ್ರವೇಶ ಕೋರಿ ಅರ್ಜಿ ಸಲ್ಲಿಸಿದರೆ ಇನ್ನೊಂದು ಶಾಲೆಗೆ ಪರಿಗಣಿಸುವುದಿಲ್ಲ ಎಂದು ಬಿಇಒ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.