ಇಂದು ಎರಡು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ
ಚನ್ನಪಟ್ಟಣ: ತಾಲೂಕಿನ ಸಿದ್ದನಹಳ್ಳಿ ಬುದ್ಧ, ಬಸವ, ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಗಾನಗಂಗಾ ಸಾಂಸ್ಕೃತಿಕ ಟ್ರಸ್ಟ್ ಸಹಯೋಗದೊಂದಿಗೆ ಬಸವ ಜಯಂತಿ ಅಂಗವಾಗಿ ವೆಂಕಟಸುಬ್ಬಯ್ಯಚೆಟ್ಟಿ- ಡಾ. ಕೆ.ಪಿ.ಶೈಲಜಾ ದತ್ತಿ ಪ್ರಶಸ್ತಿ ಪ್ರದಾನ ಹಾಗೂ ಎರಡು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ಮೇ.18ರಂದು ನಡೆಯಲಿದೆ.
ಬಾಲು ಪಬ್ಲಿಕ್ ಶಾಲೆ ಆವರಣದಲ್ಲಿ ನಡೆಯುವ ಕಾರ್ಯಕ್ರಮವನ್ನು ಶಾಸಕ ಸಿ.ಪಿ.ಯೋಗೇಶ್ವರ್ ಉದ್ಘಾಟಿಸಲಿದ್ದು, ದತ್ತಿದಾನಿ ವೆಂಕಟಸುಬ್ಬಯ್ಯಚೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಗತಿಪರ ಚಿಂತಕ ಸುಬ್ಬು ಹೊಲೆಯಾರ್ ತಾಯಿನಾಡು ಹಾಗೂ ಸೃಜನಶೀಲ ಕೃತಿಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್ಲೇಗೌಡ ಬೆಸಗರಹಳ್ಳಿ, ಯೋಗಪಟು ಗೀತಾ ವೆಂಕಟೇಶ್ ಅವರು ದತ್ತಿ ಪ್ರಶಸ್ತಿಗೆ ಭಾಜನರಾಗಿದ್ದು, ಪಶುಪಾಲನೆ ಇಲಾಖೆ ನಿರೀಕ್ಷಕ ಬಿ.ಎಸ್.ಬಸವರಾಜು ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಬಿಂದುಶ್ರೀ, ಸಿಸಿರಾ ಅವರುಗಳು ಬಸವಣ್ಣನವರ ವಚನ ಗಾಯನ ನಡೆಸಿಕೊಡಲಿದ್ದಾರೆ.