ಮಾಗಡಿಯಲ್ಲಿ ಶಂಕರ ಜಯಂತಿ ಆಚರಣೆ
ಮಾಗಡಿ: ಪಟ್ಟಣದ ಶ್ರೀರಾಮಮಂದಿರದಲ್ಲಿ ಸಡಗರ ಸಂಭ್ರಮದಿಂದ ಶಂಕರ ಜಯಂತಿ ಆಚರಿಸಲಾಯಿತು.
ಶಂಕರ ಸೇವಾ ಸಮಿತಿ ಅಧ್ಯಕ್ಷ , .ಕೆ ಹಿರಿಯಣ್ಣ, ಕಾರ್ಯದರ್ಶಿ ಕೆ.ಎಸ್.ಬಾಲಕೃಷ್ಣ, ವೇದ ಸಂಸ್ಕೃತ ಚಿಂತಕ ಎಂ.ಆರ್. ಜಗನ್ನಾಥ್, ಎಚ್.ಎಸ್. ಸುರೇಂದ್ರ, ಸಂಚಾಲಕ ಜಿ.ಎಸ್.ಯೋಗಾನಂದ್, ಎಲ್.ಆರ್.ಸುಬ್ರಮಣ್ಯಸ್ವಾಮಿ, ಎಸ್.ಎಲ್. ಪ್ರಸಾದ್ ಶೇಷಪ್ಪ, ಶಾರದಮ್ಮ ರಾಮಚಂದ್ರ, ಕೆ.ಎಸ್.ನರಹರಿರಾವ್, ಕೆ.ಎಸ್. ಹರೀಶ್, ಕೊಂಡಳ್ಳಿ ನಾಗರಾಜು, ಮೋಹನ್ ಕುಮಾರ್, ವಸಂತಕುಮಾರ್, ಬ್ರಾಹ್ಮಣ ಸಭಾ ಪದಾಧಿಕಾರಿಗಳು ಸೇರಿದಂತೆ ವಿಪ್ರ ಬಾಂಧವರು ಭಾಗವಹಿಸಿ ಶ್ರದ್ಧಾಭಕ್ತಿಯಿಂದ ಶಂಕರಾಚಾರ್ಯರ ಮೂರ್ತಿಗೆ ಪೂಜೆ ನೆರವೇರಿಸಿದರು.
ಶಂಕರ ಜಯಂತಿ ಅಂಗವಾಗಿ ಮಹಾಚಂಡಿ ಹೋಮ, ಹವನ ಪೂರ್ಣಾಹುತಿ ನಡೆಯಿತು.
ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಹಾಗೂ ಪದವಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.